

ಕಾರವಾರ: ನಗರದ ಬಿಣಗಾದಲ್ಲಿ ಸೋಲಾರೀಸ್ ಕ್ಯಾಮ್ೆಕ್ ಕಾರ್ಖಾನೆಯಿಂದ ರಾಸಾಯನಿಕ ತ್ಯಾಜ್ಯ ಹೊರಗಿನ ಚರಂಡಿಗೆ ಸೋರಿಕೆಯಾಗುತ್ತಿದ್ದು, ಜನ ಆತಂಕಕ್ಕೆ ಕಾರಣವಾಗಿದೆ.
ಬುಧವಾರ ಬಿಣಗಾ ಸೀತಾ ನಗರ ಸಮೀಪ ಚರಂಡಿಗೆ ತ್ಯಾಜ್ಯ ಸೇರಿಕೊಂಡ ಕಾರಣ ಪಾಚಿಗಳೂ ಸುಟ್ಟು ಕರಕಲಾಗಿದ್ದವು. ನೀರಿನ ಬಣ್ಣ ಬದಲಾಗಿತ್ತು. ರಾಸಾಯನಿಕಯುಕ್ತ ನೀರು ಸೇರಿ ಸುತ್ತಲಿನ ಮನೆಗಳ ಬಾವಿಗಳ ನೀರು ಈಗಾಗಲೇ ಕುಡಿಯಲು ಅಯೋಗ್ಯವಾಗಿವೆ. ಕಾರ್ಖಾನೆ ಆಡಳಿತ ಮಂಡಳಿ ಇದರ ಬಗ್ಗೆ ನಿರ್ಲಕ್ಷ್ಯಹಿಸಿದೆ. ಪದೇ ಪದೆ ಇಂಥ ಘಟನೆ ನಡೆಯುತ್ತಿದ್ದು, ಜನರ ಆರೋಗ್ಯಕ್ಕೆ ಮಾರಕವಾಗಿದೆ ಎಂದು ನಗರಸಭೆ, ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ವಹಿಸಬೇಕು ಎಂದು ಸ್ಥಳೀಯರು ದೂರಿದ್ದಾರೆ.