ಚರಂಡಿಗೆ ಬಿದ್ದಿದ್ದ ಹಸು ರಕ್ಷಣೆ

10-ANG-1a
Published on

ಅಣ್ಣಿಗೇರಿ: ಪಟ್ಟಣದ ಪುರಸಭೆ ಬಳಿಯ ಚರಂಡಿಯಲ್ಲಿ ಬುಧವಾರ ತಡರಾತ್ರಿ ಹಸುವೊಂದು ಬಿದ್ದು ಒದ್ದಾಡುತ್ತಿತ್ತು. ಚರಂಡಿಯಿಂದ ಮೇಲಕ್ಕೆ ಬರಲಾಗದೇ ನಿತ್ರಾಣಗೊಂಡಿತ್ತು. ಗುರುವಾರ ಬೆಳಗಿನಜಾವ ರೈತರು ಜಮೀನಿಗೆ ಹೋಗುವಾಗ ಆಕಳನ್ನು ಕಂಡು ಮೇಲೆತ್ತುವಲ್ಲಿ ಹರಸಾಹಸ ಪಟ್ಟರು. ಅಲ್ಲದೆ, ಸ್ಥಳೀಯ ಕೆಲ ಯುವಕರು ಹಸುವನ್ನು ಮೇಲಕ್ಕೆತ್ತಲು ಪ್ರಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ. ಬಳಿಕ ಕ್ರೇನ್ ಬಳಸಿ ಹಸುವನ್ನು ಮೇಲಕ್ಕೆತ್ತಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net