

ಕಲಬುರಗಿ: ನಗರದ ಹಳೇ ಜೇವರ್ಗಿ ರಸ್ತೆಯ ಪಿ ಆ್ಯಂಡ್ ಟಿ ಕಾಲನಿ ಬಳಿಯ ರಸ್ತೆಯಲ್ಲಿ ಚರಂಡಿ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಅಗೆದಿದ್ದ ಗುಂಡಿಯ ಮಳೆ ನೀರಲ್ಲಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮಂಗಳವಾರ ಬೆಳಗ್ಗೆ ಶವ ಪತ್ತೆಯಾಗಿದೆ.
ಎಂಎಸ್‌ಕೆ ಮಿಲï ನಿವಾಸಿ ಅಸ್ಲಾಂ (೪೨) ಮೃತ. ಒಳಚರಂಡಿ (ಯುಜಿಡಿ) ಕಾಮಗಾರಿಗಾಗಿ ಪಿಡಬ್ಲುö್ಯಡಿ ಇಲಾಖೆಯು ಹಳೆ ಜೇವರ್ಗಿಯ ರಸ್ತೆ ಬದಿಯಲ್ಲಿ ಗುಂಡಿಯನ್ನು ಅಗೆಸಿತ್ತು. ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಗುಂಡಿ ತುಂಬ ನೀರು ತುಂಬಿತ್ತು. ರಾತ್ರಿ ಕುಡಿದ ನಶೆಯಲ್ಲಿ ಗುಂಡಿಯಲ್ಲಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ್, ಪಾಲಿಕೆಯ ಮೇಯರ ಯಲ್ಲಪ್ಪ ನಾಯ್ಕೋಡಿ, ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುನ್ನೆಚ್ಚರಿಕೆ ಇಲ್ಲದಕ್ಕೆ ಸಾವು?: ನಿತ್ಯ ಸಾವಿರಾರು ಜನರು ಸಂಚರಿಸುವ ರಸ್ತೆಯಲ್ಲಿ ಐದಾರು ತಗ್ಗುಗಳನ್ನು ತೋಡಲಾಗಿದೆ. ಆದರೆ ಗುಂಡು ಬದಿ ಬ್ಯಾರಿಕೇಡ್‌ಗಳನ್ನು ಹಾಕಿರಲಿಲ್ಲ. ಮಳೆ ಸುರಿದು ಗುಂಡಿ ಸಂಪೂರ್ಣ ಭತಿಯಾಗಿದ್ದು, ತಗ್ಗಿನ ಅರಿವು ಇಲ್ಲದೆ ಗುಂಡಿಯಲ್ಲಿ ಬಿದ್ದು, ವ್ಯಕ್ತಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಕಳೆದ ವರ್ಷದ ಮಳೆಗಾಲದಲ್ಲೂ ನಗರದಲ್ಲಿ ಎರಡ್ಮೂರು ಘಟನೆಗಳು ನಡೆದಿದ್ದವು.