

ಕಲಬುರಗಿ: ಭವಾನಿ ನಗರದ ಶ್ರೀ ಗುರು ಚನ್ನವೀರ ಮಠದಲ್ಲಿ ಗುರುವಾರದಿಂದ ತಿಂಗಳವರೆಗೆ ಪವಾಡ ಪುರುಷ ಶ್ರೀ ಗುರು ಚನ್ನವೀರ ಶಿವಯೋಗಿಗಳು ಪುರಾಣ ಕಾರ್ಯಕ್ರಮ ನಡೆಯಲಿದೆ ಎಂದು ಸದ್ಭಕ್ತ ಮಂಡಳಿ ತಿಳಿಸಿದೆ.
ಪೀಠಾಧಿಪತಿ ಶ್ರೀ ಗುರುಪಾದಲಿಂಗ ಶಿವಯೋಗಿಗಳ ಸಾನ್ನಿಧ್ಯದಲ್ಲಿ ಗುರುವಾರ ಸಂಜೆ ಚಾಲನೆ ಸಿಗಲಿದೆ. ಶಿವಬಸವಯ್ಯ ಶಾಸ್ತಿçಗಳು ಪುರಾಣ ನೀಡಲಿದ್ದು, ಶಿವಲಿಂಗಯ್ಯ ಮಠಪತಿ ಸಂಗೀತ ಹಾಗೂ ಮಲ್ಲಿಕಾರ್ಜುನ ವರನಾಳ ತಬಲಾ ಸಾಥ್ ನೀಡಲಿದ್ದಾರೆ. ನಿತ್ಯ ಸಂಜೆ 8.30ರಿಂದ ರಾತ್ರಿ 10ರವರೆಗೂ ಪ್ರವಚನ ಜರುಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪುರಾಣ ಆಲಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಿದೆ.