ಚನ್ನರಾಯಪಟ್ಟಣ ಟಿಎಪಿಸಿಎಂಎಸ್ ಗೆ ಚುನಾವಣೆ, ಐದು ಸ್ಥಾನಗಳಿಗೆ ಪೈಪೋಟಿ

30 CRP 02
Published on

ಚನ್ನರಾಯಪಟ್ಟಣ: ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್)ದ 14 ನಿರ್ದೇಶಕ ಸ್ಥಾನಗಳ ಪೈಕಿ 5 ಕ್ಕೆ ಶನಿವಾರ ಚುನಾವಣೆ ನಡೆಯಲಿದೆ.

ಬೆಳಗ್ಗೆ 9 ಗಂಟೆಯಿಂದ ಸಂಜೆ 4 ರ ವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು ಸಂಜೆ 5 ಗಂಟೆಗೆ ಫಲಿತಾಂಶ ಪ್ರಕಟಗೊಳ್ಳಲಿದೆ. ಸಂಘವು ಒಟ್ಟು 1322 ಷೇರುದಾರರನ್ನು ಹೊಂದಿದ್ದು, ಐದು ವರ್ಷಗಳ ಅವಧಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿತರು ಕಣದಲ್ಲಿದ್ದು ಬಿರುಸಿನ ಪ್ರಚಾರ ನಡೆಸಿದ್ದಾರೆ.

14 ನಿರ್ದೇಶಕರ ಆಯ್ಕೆಗಾಗಿ ನಡೆಯಲಿರುವ ಚುನಾವಣಾ ಪ್ರಕಿಯೆಯಲ್ಲಿ ಎ ಮತ್ತು ಬಿ ತರಗತಿಯಡಿ ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ. ಎ ತರಗತಿಯಡಿ 6 ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿ ತರಗತಿಯಡಿ ಮಹಿಳಾ ಮೀಸಲಾತಿಯ 2 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಉಳಿದಿರುವ 5 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಲಿದೆ.
ಚುನಾವಣೆ ನಡೆಯುವ 5 ಸ್ಥಾನಗಳ ಪೈಕಿ ಸಾಮಾನ್ಯ ಕ್ಷೇತ್ರದ 2 ಸ್ಥಾನಗಳಿಗೆ 8 ಅಭ್ಯರ್ಥಿಗಳು, ಪ.ಜಾತಿ ಮೀಸಲಿನ 1 ಸ್ಥಾನಕ್ಕೆ ಇಬ್ಬರು, ಪ.ಪಂಗಡದ 1 ಸ್ಥಾನಕ್ಕೆ ಇಬ್ಬರು ಹಾಗೂ ಬಿಸಿಎಂ(ಬಿ) ಸ್ಥಾನದ 1 ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಪ.ಜಾತಿ ಮೀಸಲಾತಿ ಸ್ಪರ್ಧಿಸಿರುವ ಸಿ.ಕೆ.ಗೋಪಾಲಕೃಷ್ಣ 3ನೇ ಅವಧಿಗೆ ಹಾಗೂ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿರುವ ಡಿ.ಎಲ್.ಮಂಜುನಾಥ್ 7ನೇ ಅವಧಿಗೆ ಆಯ್ಕೆ ಬಯಸಿ ಸ್ಪರ್ಧಿಸಿದ್ದಾರೆ. ಉಳಿದಂತೆ ಹೊಸ ಮುಖಗಳು ಕಣದಲ್ಲಿವೆ.

ಅವಿರೋಧ ಆಯ್ಕೆಯಾದವರು: ಎ ತರಗತಿಯಡಿ: ಬಿ.ಎಚ್.ಶಿವಣ್ಣ, ವಿ.ಎನ್.ರಾಜಣ್ಣ, ಕೆ.ಎಂ.ನಂಜಪ್ಪ, ಎಂ.ಆರ್.ಅನಿಲ್‌ಕುಮಾರ್, ಎನ್.ಕೃಷ್ಣೇಗೌಡ ಹಾಗೂ ಸಿ.ಎನ್.ಪುಟ್ಟಸ್ವಾಮಿಗೌಡ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿ ತರಗತಿಯಡಿ: ಚಂದ್ರಕಲಾ ಹಾಗೂ ಯು.ವಿ.ಮಂಜುಳಾ ಆಯ್ಕೆಯಾಗಿದ್ದಾರೆ.
ಚುನಾವಣಾ ಕಣದಲ್ಲಿರುವವರು: ಸಿ.ಕೆ.ಗೋಪಾಲಕೃಷ್ಣ, ಸಿ.ಎಲ್.ರಘು, ಬಿ.ವಿ.ಮುನಿಸ್ವಾಮಿ, ಎಸ್.ಎಲ್.ರಾಮು, ಕೆ.ಎನ್.ನಾಗರಾಜು, ಎಂ.ಎನ್.ಬೋರೆಗೌಡ, ಬಿ.ಕೆ.ಮನು, ಡಿ.ಎಲ್.ಮಂಜುನಾಥ್, ಸಿ.ಜಿ.ರವಿ, ರಾಮಚಂದ್ರೇಗೌಡ, ಕೆ.ಎನ್.ಲೋಕೇಶ್, ಬಿ.ವಿ.ಸುರೇಶ್, ಕೆ.ಟಿ.ಮಂಜೇಗೌಡ, ರಾಮಚಂದ್ರ(ರಮೇಶ) ಹಾಗೂ ಎಂ.ಎಲ್.ಹರೀಶ ಕಣದಲ್ಲಿ ಉಳಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net