

ಕಕ್ಕೇರಾ: ಶಿಕ್ಷಣ ಇಲಾಖೆಯಲ್ಲಿ ಮೂವತ್ತು ವರ್ಷ ೧೦ ತಿಂಗಳು ಯಾವುದೇ ಲೋಪವಿಲ್ಲದೆ ಸೇವೆ ಸಲ್ಲಿಸಿ ವಯೋನಿವೃತ್ತಿಯಾದ ಚನ್ನಯ್ಯ ಸ್ವಾಮಿ ಹಿರೇಮಠ ಶಿಕ್ಷಣ ಇಲಾಖೆಗೆ ಚಿನ್ನದಂತಿದ್ದರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ ಮೆಚ್ಚುಗೆ ವ್ಯಕ್ತಪಡಿಸಿದರು.
ಕಕ್ಕೇರಾ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಡಳಿತ ಮಂಡಳಿ ಶನಿವಾರ ಹಮ್ಮಿಕೊಂಡ ಮುಖ್ಯಗುರು ಚನ್ನಯ್ಯ ಹಿರೇಮಠ ಅವರ ವಯೋನಿವೃತ್ತಿ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಕೇವಲ ನಿಮ್ಮ ಶಾಲೆಗೆ ಅಷ್ಟೇ ಅಲ್ಲ ಶಿಕ್ಷಣ ಇಲಾಖೆಗೆ ಅವರು ಚಿನ್ನದಂತಿದ್ದರು ಎಂದು ಹೇಳಿದರು.
ಚನ್ನಯ್ಯನವರು ತಮ್ಮ ಜೀವನದಲ್ಲಿ ಇಲಾಖೆ ಕಾರ್ಯಸೂಚಿಯನ್ನು ನಿಯಮಾನುಸಾರ ಪಾಲಿಸುವ ಮೂಲಕ ಸಮಯಪ್ರಜ್ಞೆಯೊಂದಿಗೆ ಕರ್ತವ್ಯಕ್ಕೆ ಹೆಚ್ಚಿನ ಮಹತ್ವ ನೀಡಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಇಲಾಖೆಗೆ, ಮಕ್ಕಳಿಗೆ ಮತ್ತು ಸಮುದಾಯಕ್ಕೆ ಚಿನ್ನದಂತೆ ಹೊಳಪಾಗಿದ್ದವರು. ಈಗ ಅವರ ನಿವೃತ್ತಿ ಬದುಕು ಬಂಗಾರವಾಗಲಿದೆ ಎಂದು ಹಾರೈಸಿದರು.
ತಾಲೂಕಿನಲ್ಲಿ ಶಿಕ್ಷಕರ ಕೊರತೆ ಸಾಕಷ್ಟಿದ್ದು, ಶೇ.೪೫ ಶಿಕ್ಷಕರಿದ್ದರೆ, ಶೇ೫೫ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ೧೧೫೮ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಸುರಪುರ ತಾಲೂಕಿನಲ್ಲಿ ಒಟ್ಟು ೪೫ ಜೀರೋ ಶಾಲೆಗಳಲ್ಲಿ ಯಾವುದೇ ರೀತಿಯ ಕಾಯಂ ಶಿಕ್ಷಕರುಗಳೇ ಇಲ್ಲ. ಇಂತ ಸಂದರ್ಭದಲ್ಲಿ ಶಿಕ್ಷಕರ ಭಾರವನ್ನು ಪರ್ಯಾಯವಾಗಿ ಪ್ರಾಥಮಿಕ ಶಾಲೆಗಳಿಗೆ ೯೦೬ ಅತಿಥಿ ಶಿಕ್ಷಕರನ್ನು ನಿಯೋಜಿಸಿ ಅವರಿಂದಲೇ ಶಾಲೆಗಳನ್ನು ಮುನ್ನಡೆಸಿಕೊಂಡು ಹೋಗಲಾಗುತ್ತಿದೆ ಎಂದರು. ಕಕ್ಕೇರಾ ಕ್ಲಸ್ಟರ್‌ದಲ್ಲಿ ವಿಶೇಷವಾಗಿ ಜೀರೋ ಶಾಲೆಗಳು ಜತೆ ಏಕೋಪಾದ್ಯಾಯ ಶಾಲೆಗಳು ಹೆಚ್ಚಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ್ ಹೇಳಿದರು.
ಪುರಸಭೆ ಸದಸ್ಯೆ ಶಿಲ್ಪಾ ರಾಠೋಡ್ ದೀಪ ಕರ‍್ಯಕ್ರಮ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಶ್ರೀನಿವಾಸ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಬಿಆರ್‌ಪಿ ರವಿ ಕನಕರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ತಾಂಡಾ ವಿದ್ಯಾರ್ಥಿಗಳಿಬ್ಬರನ್ನು ಸನ್ಮಾನಿಸಲಾಯಿತು. ಕರ‍್ಯಕ್ರಮಕ್ಕೂ ಮೊದಲು ಚನ್ನಯ್ಯ ಹಿರೇಮಠ ಅವರನ್ನು ಗ್ರಾಮಸ್ಥರು ಪುಷ್ಪಾರ್ಚನೆ ಮೂಲಕ ವೇದಿಕೆಗೆ ಗೌರವಯುತವಾಗಿ ಸ್ವಾಗತಿಸಿದರು.
ಬದ್ದೆನಾಯ್ಕ್, ಕೇಮಾನಾಯ್ಕ್, ಕೀರಾನಾಯ್ಕ್ ರಾಠೋಡ್, ವಿಜಯಲಕ್ಷ್ಮೀ ಬೊರೊಳೆ, ಅಮರಪ್ಪ ಮಂಡಿ, ಬಸವರಾಜ ಅಂಬಿಗೇರ, ಲಚಮನಾಯ್ಕ್, ಹರಿಸಿಂಗ್ ಪವಾರ್, ರಾಮಚಂದ್ರ ರಾಠೋಡ್, ಬಿಆರ್‌ಸಿ ಖಾದರ್ ಪಟೇಲ್, ಕ್ಷೇತ್ರ ಸಮನ್ವಾಧಿಕಾರಿ ಪಂಡಿತ್ ನಿಂಬೂರೆ, ಇಸಿಒ ಶರಣಬಸವ ಗಚ್ಚಿನಮನಿ, ಸಿಆರ್‌ಸಿ ಶಿವಲೀಲಾ ಹಿರೇಮಠ, ಬಸಯ್ಯಸ್ವಾಮಿ, ಸೋಮರಡ್ಡಿ ಮಂಗಿಹಾಳ್, ಗುರು ರಾಠೋಡ್, ಗೋವಿಂದಪ್ಪ ತನಿಖೆದಾರ, ತಿರುಪತಿ ಪವಾರ್, ಬಾಲುನಾಯ್ಕ್ ಇತರರಿದ್ದರು.
ಮಲ್ಲಿಕಾರ್ಜುನ ಸ್ವಾಗತಿಸಿದರು. ಬೀರಲಿಂಗ ವಂದಿಸಿದರು. ಸಂತೋಷ ತಳ್ಳಳ್ಳಿ ನಿರೂಪಣೆ ಮಾಡಿದರು.