ಚನ್ನಯ್ಯ ತತ್ವಾದರ್ಶ ಬದುಕಿಗೆ ದಾರಿದೀಪ

Channaiah
Published on

ಚಿತ್ರದುರ್ಗ: ಮನುಷ್ಯ ದ್ವೇಷ, ಅಸೂಯೆ ಬಿಟ್ಟು ಪ್ರೀತಿ, ಶಾಂತಿಯಿಂದ ಬಾಳುವುದನ್ನು ಕಲಿಯಬೇಕು. ವಚನಕಾರ ಮಾದಾರ ಚನ್ನಯ್ಯ ತತ್ವಾದರ್ಶ ನಮ್ಮೆಲ್ಲರ ಬದುಕಿಗೆ ದಾರಿದೀಪ ಎಂದು ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಸಲಹೆ ನೀಡಿದರು.

ಕೋಟೆನಾಡು ಬೌದ್ಧ ವಿಹಾರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್‌ನಿಂದ ಭಾನುವಾರ ಹಮ್ಮಿಕೊಂಡಿದ್ದ ಮಾದಾರ ಚನ್ನಯ್ಯ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಬುದ್ಧ, ಬಸವ, ಅಂಬೇಡ್ಕರ್, ಚನ್ನಯ್ಯ ಅವರಂತೆ ಸತ್ಯ ಮಾರ್ಗ ಅನುಸರಿಸಿದರೆ, ಎಲ್ಲರೂ ಸಮಾನರಾಗಿ ಬದುಕಬಹುದು. ಸಮಾಜಕ್ಕೆ ಕೊಡುಗೆ ನೀಡಬೇಕೆ ಹೊರತು ವೈಯಕ್ತಿಕ ಕೋಪಕ್ಕೆ ಸಮುದಾಯ ಬಲಿ ಕೊಡುವುದು ಸರಿಯಲ್ಲ ಎಂದರು.

ಶಿವಮೊಗ್ಗ ಕುವೆಂಪು ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಶಿವಾನಂದ ಕೆಳಗಿನಮನಿ ಮಾತನಾಡಿ, ದಲಿತರ, ಶೋಷಿತರ ಸ್ಥಿತಿ ಅಯೋಮಯವಾಗಿದ್ದ ಸಂಕೀರ್ಣ, ಮತಾಂತರದಂತ ಸಂದಿಗ್ಧ ಕಾಲಘಟ್ಟದಲ್ಲಿ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದವರು ವಚನಕಾರ ಮಾದಾರ ಚನ್ನಯ್ಯ ಎಂದರು.

ಚನ್ನಯ್ಯ ಅವರು ಶರಣ ಚಳವಳಿಯ ಆದಿಪುರುಷ ಎಂಬುದಕ್ಕೆ ಅಗಲೂರು, ಕಗ್ಗಲಪುರ ಹಾಗೂ ಜಗಲೂರು ಎಂಬ ಮೂರು ಶಾಸನಗಳೇ ನಿದರ್ಶನ ಎಂದು ಹೇಳಿದರು.

ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ, ಉಪನ್ಯಾಸಕರಾದ ಡಾ.ಬಿ.ಗುರುನಾಥ್, ನಾಗೇಂದ್ರಪ್ಪ, ಬರಹಗಾರ ಡಾ.ಲಿಂಗಣ್ಣ, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ.ಪಿ.ಪ್ರೇಮ್‌ನಾಥ್, ವಕೀಲ ಬೆನಕನಹಳ್ಳಿ ಚಂದ್ರಪ್ಪ, ಹಿರಿಯೂರು ನಗರಸಭೆ ಸದಸ್ಯ ಎಂ.ಡಿ.ಸಣ್ಣಪ್ಪ, ಡಿಎಸ್‌ಎಸ್ (ಮೀಸಲಾತಿ) ರಾಜ್ಯ ಸಂಚಾಲಕ ವೈ.ರಾಜಣ್ಣ, ಪ್ರಬುದ್ಧ ಸೇನೆ ಅಧ್ಯಕ್ಷ ಅವಿನಾಶ್, ಎಐಬಿಎಸ್‌ಪಿ ಅಧ್ಯಕ್ಷ ಪ್ರಕಾಶ್, ಬಿಎಸ್‌ಐ ಜಿಲ್ಲಾ ಕಾರ್ಯದರ್ಶಿ ನನ್ನಿವಾಳ ರವಿಕುಮಾರ್, ಭೀಮನಕೆರೆ ಶಿವಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net