ಚನ್ನಮ್ಮಾಜಿ ನಾಡು ಅಭಿವೃದ್ಧಿಪಡಿಸುವುದೇ ಧ್ಯೇಯ - ಬಾಬಾಸಾಹೇಬ ಪಾಟೀಲ

25-01
Published on

ಎಂ.ಕೆ.ಹುಬ್ಬಳ್ಳಿ: ಪ್ರಥಮ ಸ್ವಾತಂತ್ರ$್ಯದ ಕಿಚ್ಚು ಹೊತ್ತಿಸಿದ ಕಿತ್ತೂರು ಚನ್ನಮ್ಮಾಜಿ ನಾಡಿನಲ್ಲಿರುವ ಸ್ವಾತಂತ್ರ$್ಯ ಹೋರಾಟಗಾರರ ಇತಿಹಾಸವನ್ನು ಬೆಳಕಿಗೆ ತಂದು, ಆ ಸ್ಥಳಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯ ಮಾಡಬೇಕಿದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್​ ಮುನ್ನಡೆಯಲಿದೆ ಎಂದು ಕಿತ್ತೂರು ಕಾಂಗ್ರೆಸ್​ ಮುಖಂಡ ಬಾಬಾಸಾಹೇಬ ಪಾಟೀಲ ಹೇಳಿದ್ದಾರೆ.

75ನೇ ಸ್ವಾತಂತ್ರೊ$್ಯತ್ಸವ ಅಮೃತ ಮಹೋತ್ಸವ ನಿಮಿತ್ತ ಕಿತ್ತೂರು ವಿಧಾನಸಭಾ ಮತೇತ್ರದ ನೇಗಿನಹಾಳ ಗ್ರಾಮದಿಂದ ಎಂ.ಕೆ.ಹುಬ್ಬಳ್ಳಿ ವರೆಗೆ ಕಿತ್ತೂರು ಕಾಂಗ್ರೆಸ್​ನಿಂದ ಗುರುವಾರ ಹಮ್ಮಿಕೊಂಡಿದ್ದ ಸ್ವಾತಂತ್ರ$್ಯ ನಡಿಗೆ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಕಷ್ಟು ಸ್ವಾತಂತ್ರ$್ಯ ಹೋರಾಟಗಾರರನ್ನು ಗುರುತಿಸಿ, ಅವರ ಇತಿಹಾಸವನ್ನು ಈಗಿನ ಜನರಿಗೆ ಪರಿಚಯಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಸ್ವಾತಂತ್ರ$್ಯ ಹೋರಾಟಗಾರ ಮಹನೀಯರನ್ನು ಸ್ಮರಿಸುವ ಜತೆಗೆ ಜನರಲ್ಲಿ ಮತ್ತು ಯುವಕರಲ್ಲಿ ದೇಶಾಭಿಮಾನ ಬೆಳೆಸುವ ಉದ್ದೇಶದಿಂದ ಕಾಂಗ್ರೆಸ್​ ಸ್ವಾತಂತ್ರ$್ಯ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಿತ್ತೂರು ಕಾಂಗ್ರೆಸ್​ನಿಂದ ನಡೆದ ಕಾರ್ಯಕ್ರಮದಲ್ಲಿ ನಿರೀೆಗೂ ಮೀರಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದು ಖುಷಿ ತರಿಸಿದೆ ಎಂದರು.

ಕಾಂಗ್ರೆಸ್​ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಮಾತನಾಡಿ, ಸ್ವಾತಂತ್ರ$್ಯ ಹೋರಾಟಕ್ಕಾಗಿಯೇ ಹುಟ್ಟಿಕೊಂಡಿರುವುದು ಕಾಂಗ್ರೆಸ್​ ಪಕ್ಷ. ಸಾಕಷ್ಟು ಸ್ವಾತಂತ್ರ$್ಯಕ್ಕಾಗಿ ಹೋರಾಟಕ್ಕಾಗಿ ತ್ಯಾಗ&ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆಯೇ ಹೊರತು, ಇದರಲ್ಲಿ ಯಾವುದೇ ರಾಜಕೀಯ ಲಾಭವಿಲ್ಲ ಸ್ಪಷ್ಟಪಡಿಸಿದರು.

ಜಿಪಂ ಮಾಜಿ ಸದಸ್ಯೆ ರೋಹಿಣಿ ಬಾಬಾಸಾಹೇಬ ಪಾಟೀಲ ಮಾತನಾಡಿ, ಸ್ವಾತಂತ್ರೊ$್ಯತ್ಸವದ ಅಮೃತ ಮಹೋತ್ಸವ ಆಚರಿಸುತ್ತಿರುವ ನಾವೆಲ್ಲ ಪುಣ್ಯವಂತರು. ದೇಶಕ್ಕಾಗಿ ಹೋರಾಡಿದ, ಪ್ರಾಣತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸುವ ಜತೆಗೆ ಅವರ ತ್ಯಾಗ, ಬಲಿದಾನವನ್ನು ಸ್ಮರಿಸುತ್ತ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಮುನ್ನಡೆಯೋಣ ಎಂದರು.

ಕಿತ್ತೂರು ಕಾಂಗ್ರೆಸ್​ ಬ್ಲಾಕ್​ ಅಧ್ಯಕ್ಷ ಸಂಗನಗೌಡ ಪಾಟೀಲ, ನೇಸರಗಿ ಬ್ಲಾಕ್​ ಅಧ್ಯಕ್ಷ ನಿಂಗಪ್ಪ ಅರಕೇರ, ಸಂಯೋಜಕರಾದ ದಯಾನಂದ ಪಾಟೀಲ, ಜಿಲ್ಲಾ ಜನರಲ್​ ಸೆಕ್ರೆಟರಿ ಪ್ರದಿಪ್​ ಎಂ.ಜೆ, ಪಪಂ ಸದಸ್ಯ ಸುರೇಶ ಮುತ್ನಾಳ, ಅಲ್ಪಸಂಖ್ಯಾತರ ಟಕದ ಜನರಲ್​ ಸೆಕ್ರೆಟರಿ ಸಣ್ಣಪ್ಪ ರಾಮರಾವ್​, ರಾಜಾಸಲೀಂ ಖಾಶಿಮನವರ, ಎಫ್​.ಎಫ್​.ಸಕ್ರೆಣ್ಣವರ, ರಾಜೇಂದ್ರ ಇನಾಮದಾರ, ಚಂದ್ರಗೌಡ ಪಾಟೀಲ, ಶಂಕರ ಗಡಾದ, ಇಸ್ಮಾಯಿಲ್​ ಜಮಾದಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net