ಚನ್ನಮ್ಮಳ ಶೌರ್ಯ ಎಲ್ಲರಿಗೂ ಮಾದರಿ

22-22
ಬೈಲಹೊಂಗಲಕ್ಕೆ ಆಗಮಿಸಿದ ಚನ್ನಮ್ಮಳ ವೀರ ಜ್ಯೋತಿ ಯಾತ್ರೆಯನ್ನು ಶಾಸಕ ಮಹಾಂತೇಶ ಕೌಜಲಗಿ, ಪುರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಬಡ್ಲಿ, ಅಮಿತ ವಿಶ್ವನಾಥ ಪಾಟೀಲ, ಪುರಸಭೆ, ತಾಲೂಕು ಆಡಳಿತದಿಂದ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು. ಮಂಗಲಾ ಮೆಟಗುಡ್ಡ, ಬಸವರಾಜ ನಾಗರಾಳ, ಸುಭಾಷ ಸಂಪಗಾಂವಿ, ಎಫ್.ವೈ. ಮಲ್ಲೂರ ಇತರರಿದ್ದರು.
Published on

ಬೈಲಹೊಂಗಲ, ಬೆಳಗಾವಿ: ರಾಜ್ಯಾದ್ಯಂತ ಸಂಚರಿಸಿ ಪಟ್ಟಣಕ್ಕೆ ಶುಕ್ರವಾರ ಆಗಮಿಸಿದ ವೀರರಾಣಿ ಕಿತ್ತೂರು ಚನ್ನಮ್ಮಳ ವೀರಜ್ಯೋತಿಯನ್ನು ಶಾಸಕ ಮಹಾಂತೇಶ ಕೌಜಲಗಿ, ತಾಲೂಕು ಆಡಳಿತ, ಪುರಸಭೆ ಹಾಗೂ ವಿವಿಧ ಸಂಘಟನೆಗಳಿಂದ ಪೂಜೆ ಸಲ್ಲಿಸುವ ಮೂಲಕ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.

ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಅ.23 ರಿಂದ ಮೂರು ದಿನಗಳ ಕಾಲ ಜರುಗಲಿರುವ ಐತಿಹಾಸಿಕ ಕಿತ್ತೂರು ಉತ್ಸವವನ್ನು ಸರ್ಕಾರ ಈ ಬಾರಿ ರಾಜ್ಯ ಮಟ್ಟದ ಉತ್ಸವವನ್ನಾಗಿ ಆಚರಿಸುತ್ತಿರುವುದು ಸಂತಸದ ವಿಷಯವಾಗಿದೆ. ಗಂಡು ಮೆಟ್ಟಿನ ನಾಡಿನ ವೀರರಾಣಿ ಚನ್ನಮ್ಮಾಜಿ ಉತ್ಸವ ಬರುವ ದಿನಗಳಲ್ಲಿ ರಾಷ್ಟ್ರಮಟ್ಟದ ಉತ್ಸವವಾಗಿ ಆಚರಣೆಯಾಗುವ ನಿಟ್ಟಿನಲ್ಲಿ ಮುಂದಾಗಬೇಕೆಂದರು.

ಉತ್ಸವಗಳು ಸರ್ಕಾರಿ ಉತ್ಸವಗಳಾಗದೆ ಜನೋತ್ಸವವಾಗಿ ಹೊರ ಹೊಮ್ಮಬೇಕು. ಉತ್ಸವದ ದಿನಗಳಲ್ಲಿ ಜನತೆ ಸಾಗರೋಪಾದಿಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಹಬ್ಬದ ವಾತಾವರಣದಂತೆ ಉತ್ಸವ ಆಚರಣೆಯಾದಾಗ ಮಾತ್ರ ಉತ್ಸವಕ್ಕೆ ಮೆರುಗು ಬರಲಿದೆ. ಚನ್ನಮ್ಮಾಜಿ ದೇಶ ಪ್ರೇಮ, ಶೌರ್ಯ, ಸಾಹಸಗಳನ್ನು ಇಂದಿನ ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಂಡು ರಾಷ್ಟ್ರಪ್ರೇಮ ಮೆರೆದು ಉತ್ಸವದ ಉದ್ದೇಶ ಈಡೇರಿಸಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾಗನೂರ ಮಾತನಾಡಿ, ಸರ್ಕಾರದ ಆದೇಶದಂತೆ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಚನ್ನಮ್ಮಾಜಿ ಜ್ಯೋತಿಯನ್ನು ಅತ್ಯಂತ ಸಂಭ್ರಮದಿಂದ ಸ್ವಾಗತಿಸಿಕೊಂಡು, ಬೀಳ್ಕೊಟ್ಟರು. ವೀರ ಮಾತೆಯ ಜ್ಯೋತಿ ಸಂಚರಿಸುವ ಹೊಣೆ ಹೊತ್ತಿದ್ದು, ನನ್ನ ಸೌಭಾಗ್ಯ ಎಂದರು.

ಕಸಾಪ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ತಹಸೀಲ್ದಾರ್ ಬಸವರಾಜ ನಾಗರಾಳ, ತಾಪಂ ಇಒ ಸುಭಾಷ ಸಂಪಗಾಂವಿ, ಪಿಎಸ್‌ಐ ಎಫ್.ವೈ. ಮಲ್ಲೂರ, ಆದಿತ್ಯಾ ವಿಶ್ವನಾಥ ಪಾಟೀಲ, ಅಮಿತ ವಿಶ್ವನಾಥ ಪಾಟೀಲ, ಪುರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಬಡ್ಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಅಂಜನಾ ಬೊಂಗಾಳೆ, ಸದಸ್ಯರಾದ ಹೇಮಲತಾ ಹಿರೇಮಠ, ಶ್ರೀದೇವಿ ದೇವಲಾಪುರ, ವಾಣೀಶ್ರೀ ಪತ್ತಾರ, ಸುಧೀರ ವಾಲಿ, ಮೋಹನ ಪಾಟೀಲ, ಚಂದ್ರಶೇಖರ ಕೊಪ್ಪದ, ಮಹೇಶ ಕೊಟಗಿ, ಮಲ್ಲೇಶ ಹೊಸಮನಿ, ಎಸ್.ಎಂ. ಪಾಟೀಲ, ಬಸವರಾಜ ಬಡಿಗೇರ, ಕಂದಾಯ ನಿರೀಕ್ಷಕ ಸುರೇಶ ಮಾಳಗಿ, ಪುರಸಭೆ ಮ್ಯಾನೇಜರ್ ಎಂ.ಐ. ಕುಟ್ರಿ, ಇಂಜನಿಯರ್ ಆದಿಲಖಾನ ಪಠಾಣ, ಐ.ವಿ. ಕೊಂಗವಾಡ ಇತರರು ಇದ್ದರು.

ವೀರಜ್ಯೋತಿ ಮೆರವಣಿಗೆ ಇಂಚಲ ರಸ್ತೆ, ಕೇಂದ್ರ ಬಸ್ ನಿಲ್ದಾಣ, ರಾಯಣ್ಣ ವೃತ್ತ ಮಾರ್ಗವಾಗಿ ಐಕ್ಯ ಸ್ಥಳವಾದ ಚನ್ನಮ್ಮ ಸಮಾಧಿ ತಲುಪಿತು. ಗುಂಡೇನಟ್ಟಿಯ ಜಗ್ಗಲಗಿ ಮೇಳ, ಗದ್ದಿಕರವಿನಕೊಪ್ಪದ ಡೊಳ್ಳಿನ ಮೇಳ ಮೆರವಣಿಗೆಗೆ ಕಳೆ ತಂದವು. ಮರೆವಣಿಗೆ ಯುದ್ದಕ್ಕೂ ಜಯಘೋಷ ಮೊಳಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net