ಚನ್ನಮ್ಮಳ ದೇಶಪ್ರೇಮ ಜಗವೆಲ್ಲ ಪಸರಿಸಲಿ

23-44
ಬೈಲಹೊಂಗಲದಲ್ಲಿ ಚನ್ನಮ್ಮಳ ವೀರಜ್ಯೋತಿಯನ್ನು ಬೀಳ್ಕೊಡಲಾಯಿತು. ಶಾಸಕರಾದ ಮಹಾಂತೇಶ ಕೌಜಲಗಿ, ಮಹಾಂತೇಶ ದೊಡಗೌಡರ, ಪುರಸಭೆ ಅಧ್ಯಕ್ಷ ಬಸವರಾಜ, ಎಸಿ ಶಶಿಧರ ಬಗಲಿ, ತಹಸೀಲ್ದಾರ್ ಬಸವರಾಜ ನಾಗರಾಳ, ಅಮಿತ ವಿಶ್ವನಾಥ ಪಾಟೀಲ ಇತರರಿದ್ದರು.
Published on

ಬೈಲಹೊಂಗಲ, ಬೆಳಗಾವಿ: ಚನ್ನಮ್ಮಳ ಶೌರ್ಯ, ಸಾಹಸ, ದೇಶಪ್ರೇಮವನ್ನು ಈ ಬಾರಿ ರಾಜ್ಯಾದ್ಯಂತ ಪಸರಿಸಲು ವೀರಜ್ಯೋತಿ ಸಂಚರಿಸಿದ್ದು, ಮುಂದಿನ ದಿನಗಳಲ್ಲಿ ದೇಶವ್ಯಾಪ್ತಿ ಪ್ರಚುರಪಡಿಸಲು ಎಲ್ಲರೂ ಸೇರಿ ಶ್ರಮಿಸೋಣ ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.

ಪಟ್ಟಣದ ಚನ್ನಮ್ಮಳ ಐಕ್ಯ ಸ್ಥಳದಲ್ಲಿ ಚನ್ನಮ್ಮ ಸಮಾಧಿಗೆ ಗೌರವ ಸಮರ್ಪಿಸಿ ವೀರಜ್ಯೋತಿಯನ್ನು ಶನಿವಾರ ಬೀಳ್ಕೊಟ್ಟು ಮಾತನಾಡಿದ ಅವರು, ರಾಣಿ ಚನ್ನಮ್ಮ ಬ್ರಿಟಿಷರ ತೆರಿಗೆ ಸಂಗ್ರಹ, ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ವಿರೋಧಿಸಿ, ದಿಟ್ಟತನ ಪ್ರದರ್ಶಿಸಿದರು. ಸಿಪಾಯಿ ದಂಗೆಗೂ ಮೂರು ದಶಕಗಳ ಮೊದಲೇ ಸ್ವಾತಂತ್ರ್ಯದ ಕಿಡಿ ಹಚ್ಚಿದ ರಾಣಿ ಚನ್ನಮ್ಮ ನಮ್ಮೆಲ್ಲರಿಗೂ ಪ್ರೇರಣಾ ಶಕ್ತಿಯಾಗಿದ್ದಾರೆ ಎಂದರು.

ರಾಜ್ಯ ಸರ್ಕಾರ ಅ. 23, 24, 25ರಂದು ರಾಜ್ಯಮಟ್ಟದ ಅದ್ದೂರಿ ಉತ್ಸವ ಆಯೋಜಿಸಿದ್ದು, ನಾಡಿನ ಜನತೆ ಅತ್ಯಂತ ಸಂಭ್ರಮದಿಂದ ಪಾಲ್ಗೊಂಡು ಮೆರುಗು ನೀಡಬೇಕು. ಇದು ಸರ್ಕಾರಿ ಉತ್ಸವವಾಗದೇ ಜನೋತ್ಸವವಾಗಿ ಹೊರ ಹೊಮ್ಮಬೇಕು ಎಂದರು.

ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತನ್ನ ಪ್ರಾಣವನ್ನೇ ಬಲಿದಾನಗೈದ ಕಿತ್ತೂರು ಚನ್ನಮ್ಮಳ ಧೈರ್ಯ, ಶೌರ್ಯ, ಸಾಹಸ, ದೇಶಭಕ್ತಿ ಉತ್ಸವದ ಮೂಲಕ ಯುವಪೀಳಿಗೆಗೆ ಸ್ಫೂರ್ತಿಯಾಗಲಿ ಎಂದು ಹೇಳಿದರು.

ಮೆರವಣಿಗೆ: ಜ್ಯೋತಿಯು ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಗೌರವ ಸಮರ್ಪಿಸಿ, ಚನ್ನಮ್ಮ ವೃತ್ತದ ಮೂಲಕ ಅಮಟೂರ ಮಾರ್ಗವಾಗಿ ಸಾಗಿತು. ಮೆರವಣಿಗೆಯುದ್ದಕ್ಕೂ ವಿವಿಧ ವಾದ್ಯಗಳ ಮೇಳ, ಜೈಕಾರ ಘೋಷಣೆಗಳು ಮೊಳಗಿದವು. ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಎಸಿ ಶಶಿಧರ ಬಗಲಿ, ತಹಸೀಲ್ದಾರ್ ಬಸವರಾಜ ನಾಗರಾಳ, ತಾಪಂ ಇಒ ಸುಭಾಷ ಸಂಪಗಾವಿ, ಯುವ ಧುರೀಣ ಅಮಿತ ವಿಶ್ವನಾಥ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾಗನೂರ, ಸ್ಥಾಯಿ ಸಮಿತಿ ಅಧ್ಯಕ್ಷೆ ಅಂಜನಾ ಬೋಗಾಂಳೆ, ಸದಸ್ಯರಾದ ಹೇಮಲತಾ ಹಿರೇಮಠ, ಸುಧೀರ ವಾಲಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶ್ರೀಶೈಲ ಯಡಳ್ಳಿ, ಸಮನ್ವಯ ಅಧಿಕಾರಿ ಬಿ.ಎನ್.ಕಸಾಳೆ, ಮುರಳೀಧರ ಮಾಳೋದೆ, ವಿಶ್ವನಾಥ ಮಾತಾಡೆ, ನಾರಾಯಣ ನಲವಡೆ, ಬಸವರಾಜ ಅರಳಿಕಟ್ಟಿ, ಕುಮಾರ ಪಟ್ಟಣಶೆಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net