ಚನ್ನಮ್ಮ ವೃತ್ತದಲ್ಲಿ ಬೈಕ್ ಸವಾರನ ಹೈಡ್ರಾಮಾ

H28 Channamma Bike
Published on

ಹುಬ್ಬಳ್ಳಿ: ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಗುರುವಾರ ಪೂರ್ವ ಸಂಚಾರ ಠಾಣೆ ಪೊಲೀಸರು ವಾಹನಗಳ ತಪಾಸಣೆ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಬೈಕ್ ಸವಾರನೊಬ್ಬ ಹೈಡ್ರಾಮಾ ಮಾಡುವ ಮೂಲಕ ಪರಾರಿಯಾದ ಘಟನೆ ಜರುಗಿತು.

ಹೆಲ್ಮೆಟ್ ಧರಿಸದ ವ್ಯಕ್ತಿಯೊಬ್ಬ ಬಿಳಿ ಬಣ್ಣದ ಹೋಂಡಾ ಆಕ್ಟಿವಾದಲ್ಲಿ ರಾಯಣ್ಣ ವೃತ್ತದ ಕಡೆಯಿಂದ ಕೋರ್ಟ್ ವೃತ್ತದ ಕಡೆಗೆ ಹೊರಟಿದ್ದ. ಪೊಲೀಸರನ್ನು ಕಂಡ ಕೂಡಲೆ ಏಕಾಏಕಿ ಎಡಕ್ಕೆ ಗಾಡಿ ತಿರುಗಿಸಿ ಎದುರಿಗಿದ್ದ ಬೈಕ್​ಗೆ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿದ್ದ. ನಾಲ್ಕೈದು ಪೊಲೀಸರು ಆತನನ್ನು ಹಿಡಿಯುವಷ್ಟರಲ್ಲಿ ತಪ್ಪಿಸಿಕೊಂಡು ಪರಾರಿಯಾಗಿದ್ದ. ಸ್ಥಳದಲ್ಲೇ ಇದ್ದ ಪಿಎಸ್​ಐ ಎಸ್.ಎಸ್. ದೇಸಾಯಿ ಸಿಸಿಟಿವಿ ಕ್ಯಾಮರಾದಲ್ಲಿ ವಾಹನ ನೋಂದಣಿ ಸಂಖ್ಯೆ ಹಾಗೂ ಸವಾರನ ವಿಳಾಸ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net