ಚನ್ನಬಸವಣ್ಣ ಕಾಯಕದಿಂದ ಸಾಾತ್ಕಾರ ಪಡೆದ ಮಹಾತ್ಮಾ

Channabasavanna is the Mahatma realized by Kayaka
ವಿಜಯಪುರದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಾಂಸತಿಕ ಭವನದಲ್ಲಿ ಹಮ್ಮಿಕೊಂಡಿದ್ದ ಶಿವಾನುಭವ ಗೋಷ್ಠಿಯಲ್ಲಿ ಸಹಾಯಕ ಪ್ರಾಧ್ಯಾಪಕ ಡಾ. ಎಂ.ಎಸ್​. ಮಾಗಣಗೇರಿ ಮಾತನಾಡಿದರು. ವಿ.ಸಿ. ನಾಗಠಾಣ, ವಿದ್ಯಾವತಿ ಅಂಕಲಗಿ ಮತ್ತಿತರರಿದ್ದಾರೆ.
Published on

ವಿಜಯಪುರ: ಹನ್ನೆರಡನೆಯ ಶತಮಾನದ ಶರಣರು ತಮ್ಮ ವಚನಗಳ ಮೂಲಕ ಸನ್ನಡತೆಯಿಂದ ನಡೆಯಲು ಸಂದೇಶ ನೀಡಿದ್ದಾರೆ. ಬಸವಾದಿ ಶರಣರ ಚಿಂತನೆಯಿಂದ ಅವರ ಅನುಭವದ ನುಡಿಗಳು ಬದುಕಿನ ಸಮೃದ್ಧತೆಗೆ ಪೂರಕವಾಗಿದೆ ಎಂದು ಸಹಾಯಕ ಪ್ರಾಧ್ಯಾಪಕ ಡಾ. ಎಂ.ಎಸ್​. ಮಾಗಣಗೇರಿ ಹೇಳಿದರು.

ನಗರದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಾಂಸತಿಕ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಹಿನ್ನೆಲೆ ಚನ್ನಬಸವಣ್ಣನವರ ಅನುಭಾವ ಕುರಿತು ಉಪನ್ಯಾಸ ನೀಡಿ, ಅಜಾತ ವಿಚಾರ ಜ್ಞಾನದ ಅರಿವು ನಿಸ್ವಾರ್ಥ ಬದುಕನ್ನು ಬಾಳಿ ತತ್ವ ಆದರ್ಶಗಳಿಂದ ಸತ್ಯ, ನಿಷ್ಠೆ, ಕಾಯಕದಿಂದ ಸಾಾತ್ಕಾರ ಪಡೆದವರು. ಚನ್ನಬಸವಣ್ಣನವರು ರಚಿಸಿದ 1777 ವಚನಗಳು ಲಭ್ಯವಾಗಿವೆ ಎಂದರು.

ಮುಖ್ಯ ಅತಿಥಿ ವಿದ್ಯಾವತಿ ಅಂಕಲಗಿ ಮಾತನಾಡಿ, ನಡೆ, ನುಡಿ ಪರಿಶುದ್ಧವಾಗಿರಬೇಕು. ಮನಸ್ಸು ಶಾಂತವಾಗಿರಬೇಕು, ಶರಣರ ಅನುಭವದ ನುಡಿಗಳು, ಆಳ, ಅಗಲ ನಿಲುಕಲು ಸಾಧ್ಯವಿಲ್ಲ. ಚನ್ನಬಸವಣ್ಣನವರ ಅನುಭವದ ಅನುಭಾವದಿಂದ ಕೂಡಿದಂತಹದು ಅವರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ, ಚನ್ನಬಸವಣ್ಣನವರು ಕೇವಲ 24 ವರ್ಷ ಮಾತ್ರ ಬದುಕಿನದವರು. ಪ್ರಾಯದಲ್ಲಿ ಅವರ ಕೀರ್ತಿ ಜ್ಞಾನ ಅಪಾರವಾಗಿದ್ದು, ಅನುಭವ ಮಂಟಪದ ಪರಿಸರದಲ್ಲಿ ಬೆಳೆದವರು. ವಚನ ಸಾಹಿತ್ಯದ ಮೂಲಕ ಜಲ, ತಪಗಳ ಪೂಜೆ ಬೇಕಾಗಿಲ್ಲ. ಮಾತು ಕೃತಿಗೂ ವ್ಯತ್ಯಾಸವಾಗಬಾರದು ಎಂದರು.

ನಂತರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ದ್ರಾಕ್ಷಾಯಿಣಿ ಬಿರಾದಾರ ಅವವನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಕ್ಕಮಹಾದೇವಿ ಬುರ್ಲಿ, ವಿಠಲ ತೇಲಿ, ಸಹದೇವ ನಾಡಗೌಡರ, ಎಸ್​.ಎನ್​. ಶಿವಣಗಿ, ಮಹಾದೇವ ಹಾಲಳ್ಳಿ, ಶಿವಪುತ್ರ ಪೋಳ, ಈಶ್ವರಗೊಂಡ ಒಂಟಗೂಡಿ, ಬಸವರಾಜ ಇಟ್ಟಂಗಿ, ಮ.ನು. ಪತ್ತಾರ, ಕಾಶಿನಾಥ ಅಣೆಪ್ಪನವರ ಮತ್ತಿತರರಿದ್ದರು.

ವಿಠಲ ತೇಲಿ ಸ್ವಾಗತಿಸಿದರು. ಸಾಹಿತಿ ಸಂಗಮೇಶ ಬದಾಮಿ ನಿರೂಪಿಸಿದರು. ಎಂ.ಜಿ. ಯಾದವಾಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net