ಚನ್ನಬಸವ, ರಾಜಣ್ಣ ಸೇರಿ 121 ಪೊಲೀಸರಿಗೆ ಸಿಎಂ ಪದಕ

channabasava balappagol (cm medal police)
Published on

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವ 121 ಅಧಿಕಾರಿ, ಸಿಬ್ಬಂದಿಗೆ 2019ನೇ ಸಾಲಿನ ಮುಖ್ಯಮಂತ್ರಿ ಪದಕವನ್ನು ರಾಜ್ಯ ಸಕರ್ಾರ ಗುರುವಾರ ಘೋಷಣೆ ಮಾಡಿದೆ. ಸಿಎಂ ಮೆಡಲ್ಗೆ ಕಲಬುರಗಿಯ ಡಿಆರ್ಎ ಆರ್ಪಿಐ ಚನ್ನಬಸವ ಬಾಲಪ್ಪಗೋಳ, 6ನೇ ಕೆಎಸ್ಆರ್ಪಿ ಪಡೆಯ ವಿಶೇಷ ಆರ್ಪಿಐ ಡಿ.ಬಳಿರಾಮ, ಬೀದರ್ ವೃತ್ತದ ಸಿಪಿಐ ಡಿ.ಜಿ.ರಾಜಣ್ಣ, ಯಾದಗಿರಿ ಜಿಲ್ಲಾ ಪೊಲೀಸ್ ನಿಸ್ತಂತು ವಿಭಾಗದ ಎಎಸ್ಐ ಅಬ್ಬಾಸ್ ಅಲಿ ಆಯ್ಕೆಯಾಗಿದ್ದಾರೆ. ಪ್ರತಿವರ್ಷ ಏಪ್ರಿಲ್ 2ರ ಪೊಲೀಸ್ ಧ್ವಜ ದಿನಾಚರಣೆ ವೇಳೆ ಮುಖ್ಯಮಂತ್ರಿ ಪದಕ ಘೋಷಣೆ ಮಾಡಲಾಗುತ್ತಿತ್ತು. 2019ರಲ್ಲಿ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ತಡೆ ನೀಡಲಾಗಿತ್ತು. ಈಗ ಸಕರ್ಾರ ಆಯ್ಕೆಯಾದವರ ಪಟ್ಟಿ ಪ್ರಕಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net