ಚನ್ನಪಟ್ಟಣದಲ್ಲಿ ಕಬ್ಬು ಖರೀದಿ ಜೋರು

6
Published on

ಚನ್ನಪಟ್ಟಣ: ಕೋವಿಡ್ ನಿಯಂತ್ರಣಕ್ಕಾಗಿ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದೆ. ಈ ಮಧ್ಯೆ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಆಚರಿಸಲು ತಾಲೂಕಿನ ಜನತೆ ಸಜ್ಜಾಗಿದ್ದಾರೆ. ನಗರದಲ್ಲಿ ಶುಕ್ರವಾರ ಹಬ್ಬದ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು. ನಗರದ ಎಂಜಿ ರಸ್ತೆ, ಜೆಸಿ ರಸ್ತೆ, ಅಂಚೆಕಚೇರಿ ರಸ್ತೆ, ರೈಲ್ವೆ ನಿಲ್ದಾಣ ರಸ್ತೆ, ಬಿಎಂ ರಸ್ತೆ ಸೇರಿ ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಹಬ್ಬದ ವಸ್ತುಗಳ ಖರೀದಿ ಜೋರಾಗಿತ್ತು. ರಸ್ತೆಬದಿಯ ವ್ಯಾಪಾರವೂ ಭರ್ಜರಿಯಾಗಿ ನಡೆಯಿತು.

ಎಲ್ಲೆಡೆ ಕಬ್ಬು, ಕಡಲೆಕಾಯಿ, ಅವರೆಕಾಯಿ, ಗೆಣಸು ರಾಶಿ ಕಂಡುಬಂತು. ಎಳ್ಳು-ಬೆಲ್ಲ, ಸಕ್ಕರೆ ಅಚ್ಚುಗಳ ಮಾರಾಟವೂ ಜೋರಾಗಿತ್ತು. ಕಬ್ಬಿನ ವ್ಯಾಪಾರ ಕೊಂಚ ಜೋರಾಗಿತ್ತು. ಈ ಬಾರಿಗೆ ಕಬ್ಬಿನ ದರ ತುಸು ಹೆಚ್ಚಾಗಿದ್ದನ್ನು ಹೊರತುಪಡಿಸಿದರೆ, ಉಳಿದ ವಸ್ತುಗಳ ದರ ಸಾಮಾನ್ಯವಾಗಿತ್ತು. ಅಧಿಕ ಮಳೆಯಿಂದ ಈ ಬಾರಿ ಕಡಲೆಕಾಯಿ, ಅವರೆಕಾಯಿ ಬೆಳೆಗಳು ಹಾನಿಗೆ ಒಳಗಾಗಿದ್ದರಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬಂದಿಲ್ಲ. ಹಾಗಾಗಿ ಇವುಗಳ ದರಗಳೂ ತುಸು ಹೆಚ್ಚೇ ಇವೆ. ಈ ಮಧ್ಯೆ ಯಾವುದೇ ಆತಂಕವಿಲ್ಲದೇ ಹಬ್ಬದ ಮುನ್ನಾದಿನ ಮಾರುಕಟ್ಟೆಯಲ್ಲಿ ಜನತೆ ಯಾವುದೇ ಸಾಮಾಜಿಕ ಅಂತರವಿಲ್ಲದೆ ಖರೀದಿಯಲ್ಲಿ ತೊಡಗಿದ್ದು ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net