ಚನ್ನಗಿರಿಯಲ್ಲಿ ಗಾಂಜಾ ಸೊಪ್ಪು ವಶ, ಮೂವರ ಬಂಧನ

IMG-20230926-WA0034.jpg
Published on

ದಾವಣಗೆರೆ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಚನ್ನಗಿರಿ ಠಾಣೆ ಪೊಲೀಸರು 25 ಸಾವಿರ ರೂ ಮೌಲ್ಯದ 1ಕೆಜಿ 425 ಗ್ರಾಂ ತೂಕದ ಗಾಂಜಾ ಸೊಪ್ಪನ್ನು

ವಶಪಡಿಸಿಕೊಂಡಿದ್ದಾರೆ.

ಚನ್ನಗಿರಿ ಟಿಪ್ಪುನಗರದ ಸಮೀಉಲ್ಲಾ, ಉಪ್ಪಾರಹಟ್ಟಿಯ ರಂಗನಾಥ್, ಕೆರೆಬಿಳಚಿ ಗ್ರಾಮದ ಮೊಹಮ್ಮದ್ ರಿಹಾನ್ ಬಂಧಿತ ಆರೋಪಿಗಳು.

ಚನ್ನಗಿರಿ ನಗರದ ವಡ್ನಾಳ್ ರಾಜಣ್ಣ ಬಡಾವಣೆಯ ಮುಖ್ಯ ರಸ್ತೆಯಲ್ಲಿ ಗಾಂಜಾ ಸೊಪ್ಪು ಮಾರಾಟ ಮಾಡಲಾಗುತ್ತಿತ್ತು.

ಚನ್ನಗಿರಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ನಿರಂಜನ, ಪಿ.ಎಸ್.ಐ. ಮೊಹಮ್ಮದ್ ಸೈಫುದ್ದೀನ್ ಹಾಗೂ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಗೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net