ಚನ್ನಕೇಶವಸ್ವಾಮಿ ದೇಗುಲದಲ್ಲಿ ವಿಷ್ಣು ದೀಪೋತ್ಸವ

9blrp2.
ವಿಷ್ಣು ದೀಪೋತ್ಸವದ ಅಂಗವಾಗಿ ಬೇಲೂರಿನ ಶ್ರೀ ಚನ್ನಕೆಶವಸ್ವಾಮಿ ದೇಗುಲದ ಆವರಣದಲ್ಲಿ ದೀಪ ಹಚ್ಚಲಾಯಿತು.
Published on

ಬೇಲೂರು: ಬೇಲೂರು ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲದಲ್ಲಿ ಗುರುವಾರ ರಾತ್ರಿ ಕಾರ್ತಿಕ ಮಾಸದ ವಿಷ್ಣು ದೀಪೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ನೂರಾರು ಭಕ್ತರ ಸಮ್ಮುಖದಲ್ಲಿ ದೀಪೋತ್ಸವ ಆಚರಿಸಲಾಯಿತು.
ದೇಗುಲದ ಪ್ರಾಂಗಣ, ಗೋಪುರದ ಸಮೀಪ ಮಣ್ಣಿನ ಹಣತೆಗಳನ್ನು ಹಚ್ಚಲಾಯಿತು. ನಂತರ ಉತ್ಸವಮೂರ್ತಿಯೊಂದಿಗೆ ಸಂಪ್ರದಾಯದಂತೆ ದೇವರ ಗರ್ಭಗುಡಿಯಿಂದ ಪೂಜಿಸಿದ ಘಟ ದೀಪ ತರಲಾಯಿತು. ಈ ಸಂದರ್ಭ ವೇದ ಪಾರಾಯಣ, ಘಂಟಾನಾದ, ವಾದ್ಯದ ಮೂಲಕ ಕುಂಭಾರತಿಯನ್ನು ಬೆಳಗಿಸಲಾಯಿತು. ನಂತರ ಉತ್ಸವ ಮೂರ್ತಿಯನ್ನು ದೇಗುಲದ ರಾಜಗೋಪುರ ಮುಂದೆ ಪೂರ್ವಾಭಿಮುಖ ವಾಗಿ ಪ್ರತಿಷ್ಠಾಪಿಸಿ, ಗೋಪುರದ ಬೃಹತ್ ದ್ವಾರದಲ್ಲಿ ಎಣ್ಣೆಯಲ್ಲಿ ನೆನಸಿದ ನೀಳವಾದ ಬಿಳಿ ಬಟ್ಟೆಯನ್ನು ನೇತುಹಾಕಿ ಅದಕ್ಕೆ ದೇಗುಲದ ದೀಪದಿಂದ ಹಚ್ಚಲಾಯಿತು. ಬಟ್ಟೆ ಸಂಪೂರ್ಣ ಸುಟ್ಟ ಬಳಿಕ ಭಸ್ಮವನ್ನು ನೆರೆದಿದ್ದ ಭಕ್ತರು ಹಣೆಗೆ ತಿಲಕ ಇಡಲಾಯಿತು. ಉತ್ಸವ ಮೂರ್ತಿಗೆ ಮಹಾ ಮಂಗಳಾರತಿ ನೆರವೇರಿಸಿ ನೆರೆದಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಶ್ರೀ ಚನ್ನಕೇಶವಸ್ವಾಮಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಇಒ ವಿದ್ಯುಲ್ಲತಾ, ಪ್ರಧಾನ ಅರ್ಚಕ ಶ್ರೀನಿವಾಸಭಟ್ ಸೇರಿದಂತೆ ಸಮಿತಿ ಸದಸ್ಯರು, ನೂರಾರು ಭಕ್ತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net