ಚಡಚಣದಲ್ಲಿ ಶ್ರೀರಾಮ ಭಾವಚಿತ್ರ ಮೆರವಣಿಗೆ

Chadchana, Sri Rama, Ayodhya, Gurupadeshwar Swamiji, Vijayamahanteswara Swamiji, Shadakshari Swamiji,
ಚಡಚಣ ಪಟ್ಟಣದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ಮಂತ್ರಾಕ್ಷತೆ, ಭಾವಚಿತ್ರ, ಕರಪತ್ರಗಳನ್ನು ಮೆರವಣಿಗೆ ಮಾಡಲಾಯಿತು. ಗುರುಪಾದೇಶ್ವರ ಸ್ವಾಮೀಜಿ, ವಿಜಯಮಹಾಂತೇಶ್ವರ ಸ್ವಾಮೀಜಿ, ಷಡಕ್ಷರಿ ಸ್ವಾಮೀಜಿ ಉಪಸ್ಥಿತರಿದ್ದರು.
Published on

ಚಡಚಣ: ಅಯೋಧ್ಯೆಯ ಶ್ರೀರಾಮ ಮಂದಿರದ ಮಂತ್ರಾಕ್ಷತೆ, ಪ್ರಭು ಶ್ರೀರಾಮನ ಭಾವಚಿತ್ರ ಹಾಗೂ ಕರಪತ್ರಗಳು ಭಾನುವಾರ ಚಡಚಣ ಪಟ್ಟಣ ತಲುಪಿದಾಗ ಅದ್ದೂರಿಯಾಗಿ ಸ್ವಾಗತಿಸಿ ಮೆರವಣಿಗೆ ಮಾಡಲಾಯಿತು.

ಅಗಸಿ ಹನುಮಾನ ಮಂದಿರದಿಂದ ಪ್ರಾರಂಭಗೊಂಡ ಮಂತ್ರಾಕ್ಷತೆಯ ಭವ್ಯ ಮೆರಣಿಗೆ ಪಲ್ಲೇದ ಕಟ್ಟಿ, ಎಸ್.ಬಿ.ಐ., ಬಸವೇಶ್ವರ ವೃತ್ತ, ಶಿವಾಜಿ ವೃತ್ತಗಳ ಮೂಲಕ ಸಂಚರಿಸಿ, ನವಗ್ರಹ ದೇವಸ್ಥಾನದವರೆಗೆ ಮಂಗಳವಾದ್ಯಗಳೊಂದಿಗೆ ತಲುಪಿತು.

ಆರ್.ಎಸ್.ಎಸ್ ಹಿರಿಯ ಪ್ರಚಾರಕ ಸುರೇಶ ಜೀ ಮಾತನಾಡಿ, ಮಂತ್ರಾಕ್ಷತೆ ವಿತರಿಸುವ ಈ ಪವಿತ್ರ ಕಾರ್ಯ ದೇಶವಾಸಿಗಳಲ್ಲಿ ರಾಮಭಕ್ತಿ, ಧರ್ಮಶ್ರದ್ಧೆ ಇಮ್ಮಡಿಗೊಳಿಸುವಲ್ಲಿ ಗುರುತರ ಪಾತ್ರ ವಹಿಸುವಂತಾಗಿದೆ. ಜ.22 ರಂದು ನಾವೆಲ್ಲರೂ ನಮ್ಮ ಮನೆಯಲ್ಲ್ಲಿ ಅಥವಾ ಗ್ರಾಮಗಳಲ್ಲಿರುವ ದೇವಸ್ಥಾನಗಳ ಸನ್ನಿಧಿಯಲ್ಲಿ ಮಂತ್ರಾಕ್ಷತೆಯನ್ನು ರಾಮನ ಹೆಸರಿನಲ್ಲಿ ಸಮರ್ಪಿಸುವುದರ ಮೂಲಕ ಪ್ರಭು ಶ್ರೀರಾಮನ ಪ್ರತಿಷ್ಠಾಪನೆಯ ಅಮೃತ ಘಳಿಗೆಗೆ ಸಾಕ್ಷಿಯಾಗೋಣ ಎಂದರು.

ಹತ್ತಳ್ಳಿ-ಹಾವಿನಾಳ ಗುರುಪಾದೇಶ್ವರ ಸ್ವಾಮೀಜಿ, ಹಾವಿನಾಳ ಗ್ರಾಮದ ವಿಜಯಮಹಾಂತೇಶ್ವರ ಸ್ವಾಮೀಜಿ, ಪಟ್ಟಣದ ಷಡಕ್ಷರಿ ಸ್ವಾಮೀಜಿ ಹಾಗೂ ಸಾವಿರಾರು ಹಿಂದು ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net