ಚಟುವಟಿಕೆಗಳಿಂದ ಸಮಗ್ರ ವ್ಯಕ್ತಿತ್ವ ವಿಕಸನ

3
Published on


ರಾಮದುರ್ಗ: ವಿದ್ಯಾರ್ಥಿಗಳು ವ್ಯಾಸಂಗದ ಜತೆಗೆ ಕಾಲೇಜಿನಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯಲ್ಲಿ ಪಾಲ್ಗೊಂಡಲ್ಲಿ ಸಂಪೂರ್ಣ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಉಪನ್ಯಾಸಕ ಡಾ.ಸಿದ್ದಪ್ಪ ಕಟ್ಟೇಕಾರ ಹೇಳಿದರು.
ತಾಲೂಕಿನ ಸುರೇಬಾನ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಈಚೆಗೆ ಏರ್ಪಡಿಸಿದ್ದ ಕ್ರೀಡೆ ಹಾಗೂ ಸಾಂಸತಿಕ ಚಟುವಟಿಕೆಗಳ ಪ್ರಾರಂಭೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಸುರೇಬಾನ ನೀರಾವರಿ ಇಲಾಖೆಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ನಾಗರಾಜ ಪಿ.ಇ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ದೆಸೆೆಯಲ್ಲಿಯೇ ಉತ್ತಮ ಗುರಿಯೊಂದಿಗೆ ಅಧ್ಯಯನ ಮಾಡಿದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.

ಅವರಾದಿ ಗ್ರಾಪಂ ಅಧ್ಯೆ ಮಹಾದೇವಿ ಬಾಡಗಾರ ಸಿಂಚನ ಕೃತಿ ಬಿಡುಗಡೆಗೊಳಿಸಿದರು. ಪ್ರಾಚಾರ್ಯ ರಮೇಶ ಮೋಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶಿವಮೂರ್ತಪ್ಪ ಗುರುಬಸಣ್ಣವರ, ಶಿವು ಮೇಟಿ, ಮಹಾಂತೇಶ ಮೋಟೆ, ಮಂಜುನಾಥ ಪಾಟೀಲ, ಸಾಂಸತಿಕ ವಿಭಾಗದ ಮುಖ್ಯಸ್ಥ ರಮೇಶ ಬಡಿಗೇರ ಇತರರಿದ್ದರು. ಸಾವಿತ್ರಿ ಪಾಟೀಲ ಸ್ವಾಗತಿಸಿದರು. ಡಾ. ಅಶ್ವಿನಿ ಟಿ.ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್​.ಬಿ. ಪಾಟೀಲ ನಿರೂಪಿಸಿದರು. ಪ್ರಕಾಶ ವಡ್ಡರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net