ಚಟುವಟಿಕೆ ಆಧಾರಿತ ಕಲಿಕೆಗೆ ಪ್ರೋತ್ಸಾಹಿಸಲಿ

14CKD1
Published on

ಚಿಕ್ಕೋಡಿ: ಶಿಕ್ಷಕರು ರಚನಾತ್ಮಕ ಮನೋಭಾವ ಇಟ್ಟುಕೊಂಡು ವಿದ್ಯಾರ್ಥಿಗಳ ನಿರಂತರ ಮೌಲ್ಯಮಾಪನ ಮಾಡಿ ಚಟುವಟಿಕೆ ಆಧಾರಿತ ಕಲಿಕೆಗೆ ಪ್ರೋತ್ಸಾಹಿಸುವುದು ಅವಶ್ಯ ಎಂದು ಚೌಸನ್ ನರ್ಸರಿ ಶಾಲೆಯ ನಿರ್ದೇಶಕಿ ಸವಿತಾ ಹೆಗಡೆ ಹೇಳಿದರು.

ಇಲ್ಲಿನ ಚೌಸನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರ ಮಾದರಿ ಪಾಠ ಯೋಜನೆ ಅಭಿವೃದ್ಧಿಪಡಿಸುವ ಕುರಿತು ಈಚೆಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಎನ್‌ಇಪಿ ದೇಶದ ಶಿಕ್ಷಣ ವ್ಯವಸ್ಥೆ ಮರುಕಲ್ಪಿಸುವ ದೃಷ್ಟಿಕೋನ. ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆಯಿಂದ ಸಮಸ್ಯೆ ಪರಿಹರಿಸಲು ಸಜ್ಜಾಗಬೇಕು. ಭಿನ್ನ ಚಿಂತನೆಗಳಿಗೆ ತೆರೆದುಕೊಳ್ಳಬೇಕು ಎಂದರು.

ಬನ್ನಪ್ಪ ಚೌಗುಲೆ, ಸಂತೋಷ ಪಟ್ಟಣಕುಡಿ, ಆಕಾಶ ಕೋಜಪುರ, ಆಕಾಶ ಕಾಂಬಳೆ, ಮಲ್ಕರಿ ಮಸರಗುಪ್ಪಿ, ಸುನೀಲ ಹುಣಸಿಕಟ್ಟಿ ಅವರು ಕ್ರಮವಾಗಿ ಕನ್ನಡ, ಇಂಗ್ಲಿಷ್, ರಸಾಯನಶಾಸ್ತ್ರ, ಗಣಿತ, ಇತಿಹಾಸ, ಭೂಗೋಳಶಾಸ್ತ್ರ ವಿಭಾಗದ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸಿದರು. ಜೀವಶಾಸ್ತ್ರ ವಿಭಾಗದ ಕಾರ್ಯದರ್ಶಿ ಪ್ರಿಯಾಂಕ ಸಿಂಗಾಯಿ ಪ್ರಾಸ್ತಾವಿಕ ಮಾತನಾಡಿದರು. ಪ್ರಾಂಶುಪಾಲರಾದ ಡಾ. ತನುಜಾ ಕುಮಾರ, ಡಾ.ಕನಕಾಚಲ ಕನಕಗಿರಿ, ಡಾ.ಎನ್.ಎಸ್. ಶಿಂಧೆ, ಸುಜಾತ ಚಂದ್ಗಡೆ, ಎಂ.ಎಚ್. ರಾವುತ್, ಕವಿತಾ ಹರಕೆ, ಆಸ್ಮಾ ಜಮಾದಾರ, ಉಜ್ವಲ ಮಾನೆ, ಪ್ರಶಾಂತ ಪತ್ತಾರ, ಗಂಗಾ ಜಾಧವ, ಲಕ್ಷ್ಮಿ ಸಾವಂತ, ಪ್ರತೀಕ್ಷಾ ಕಾಂಬಳೆ, ದೇವತಾ ಲೊಹಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net