ಚಕ್ರವರ್ತಿ ಸೂಲಿಬೆಲೆ ಆರೋಪ ಹಾಸ್ಯಾಸ್ಪದ

4fd061ee-9da9-4b22-975b-3ff45a31ee5a
Published on

ಮೈಸೂರು: ತಿ.ನರಸೀಪುರದ ವೇಣುಗೋಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾಡುತ್ತಿರುವ ಆರೋಪಗಳು ಹಾಸ್ಯಾಸ್ಪದವಾಗಿವೆ ಎಂದು ದಲಿತ ಮಹಾಸಭಾ ಅಧ್ಯಕ್ಷ ಎಸ್.ರಾಜೇಶ್ ಟೀಕಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಪುತ್ರ ಸುನಿಲ್‌ಬೋಸ್ ಅವರ ಬೆಂಬಲಿಗರಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಕ್ಷುಲ್ಲಕ ಕಾರಣಗಳಿಗಾಗಿ ಈ ಕೊಲೆ ನಡೆದಿದೆ. ಈ ಹಿಂದೆಲ್ಲ ದಲಿತರ ಮೇಲೆ ಉತ್ತರ ಭಾರತ ಹಾಗೂ ರಾಜ್ಯದ ಇನ್ನಿತರ ಕಡೆ ದೌರ್ಜನ್ಯ ನಡೆದಾಗ ಚಕ್ರವರ್ತಿ ಸೂಲಿಬೆಲೆ ಏಕೆ ಸುಮ್ಮನಿದ್ದರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ವೇಣುಗೋಪಾಲ್ ಕೊಲೆ ಪ್ರಕರಣ ಬಳಸಿಕೊಂಡು ಸುನಿಲ್ ಬೋಸ್ ಅವರ ದಮನಕ್ಕೆ ಬಿಜೆಪಿ ಯತ್ನಿಸುತ್ತಿದೆ. ಸತ್ಯಶೋಧನಾ ಸಮಿತಿ ಎಂಬ ಹೆಸರಿನಲ್ಲಿ ಈ ಪಿತೂರಿ ನಡೆಯುತ್ತಿದೆ ಎಂದು ದೂರಿದರು.
ಕೊಲೆ ಆರೋಪಿಗಳಿಗೂ, ಕೊಲೆಯಾದವರಿಗೂ ಬಹಳಷ್ಟು ವರ್ಷಗಳಿಂದ ಸ್ನೇಹ ಸಂಬಂಧ ಇತ್ತು. ಇದು ವೈಯಕ್ತಿಕ ವಿಚಾರದ ಕುರಿತು ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಆದರೆ, ಕಾಂಗ್ರೆಸ್ ನಾಯಕರ ವಿರುದ್ಧ ಆರೋಪ ಮಾಡುತ್ತಿರುವುದು ರಾಜಕೀಯ ದ್ವೇಷದಿಂದ ಕೂಡಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net