ಚಂದ್ರವಳ್ಳಿ ಕ್ರಾಸ್ ಬಳಿ ಬಸವ ಪುತ್ಥಳಿ ಪ್ರತಿಷ್ಠಾಪನೆ

ctd basava..............
Published on

ಚಿತ್ರದುರ್ಗ: ವೀರಶೈವ ಲಿಂಗಾಯಿತ ಯುವ ವೇದಿಕೆಯಿಂದ ನಗರದ ಚಂದ್ರವಳ್ಳಿ ಕ್ರಾಸ್ ಬಳಿ ಬಸವ ಪುತ್ಥಳಿಯನ್ನು ಮಂಗಳವಾರ ಪ್ರತಿಷ್ಠಾಪಿಸಲಾಯಿತು. ಚಿತ್ರದುರ್ಗ ವೀರಶೈವ ಲಿಂಗಾಯಿತ ಯುವ ವೇದಿಕೆ ಅಧ್ಯಕ್ಷ ಎಚ್.ಎಂ.ಮಂಜುನಾಥ್ ಮಾತನಾಡಿ,12ನೇ ಶತಮಾನದ ಕ್ರಾಂತಿಕಾರಿ,ಭಕ್ತಿ ಭಂ ಡಾರಿ ಬಸವಣ್ಣ ಅವರು ಅನುಭವ ಮಂಟಪದ ಮೂಲಕ ಮಹಿಳೆಯರಿಗೂ ಸಮಾನತೆ ಕಲ್ಪಿಸಿದರು. ಕಾಯಕವೇ ಕೈಲಾಸ ಎನ್ನುವುದು ಬಸವಣ್ಣನವರ ಧ್ಯೇಯವಾಗಿತ್ತು. ಇಂತಹ ಮಹಾನ್ ಪುರುಷನ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕಿದೆ ಎಂದರು. ವೇದಿಕೆ ಗೌರವಾಧ್ಯಕ್ಷ ಅಶೋಕ್,ಉಪಾಧ್ಯಕ್ಷ ಗಿರೀಶ್,ತಾಪಂ ಕೆಡಿಪಿ ಸದಸ್ಯ ನಾಗರಾಜ್,ಗಾರೆಹಟ್ಟಿ ವಿಜಯಕುಮಾರ್, ಕಾರ್ತಿಕ್, ರುದ್ರೇಶ್, ಮಂಜುನಾಥ್, ಶಿವಕುಮಾರ್,ಹನೀಸ್, ಅಜೀಮ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net