ಚಂದ್ರಯಾನ ಯಶಸ್ವಿಗೆ 1008 ಬಾರಿ ಸ್ತೋತ್ರ ಪಠಣ

NR
Published on

ಕಲಬುರಗಿ: ಭಾರತ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ಉಡಾವಣೆ ಮಾಡಿರುವ ಚಂದ್ರಯಾನ-3 ಯಶಸ್ವಿಯಾಗಲೆಂದು ನ್ಯೂ ರಾಘವೇಂದ್ರ ಕಾಲನಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಶ್ರೀ ಸತ್ಯಾನಂದ ಪಾರಾಯಣ ಸಂಘ, ವಿಷ್ಣು ಸಹಸ್ರ ನಾಮ ಪಾರಾಯಣ ಸಂಘ ಉತ್ತರ ವಲಯ, ಹಂಸ ನಾಮಕ ಪಾರಾಯಣ ಸಂಘ, ಲಕ್ಷ್ಮೀನಾರಾಯಣ ಪಾರಾಯಣ ಸಂಘ, ಪೂರ್ಣ ಪ್ರಜ್ಞ ಪಾರಾಯಣ ಸಂಘದಿಂದ ಸಾಮೂಹಿಕವಾಗಿ 1008 ಬಾರಿ ಶ್ರೀ ಲಕ್ಷ್ಮಿ ವೆಂಕಟೇಶ ಸ್ತೋತ್ರ ಪಠಣ ಮಾಡಲಾಯಿತು.

ಇಸ್ರೋ ಸಂಸ್ಥೆಯ ಮಹತ್ವಕಾಂಕ್ಷಿ ಯೋಜನೆಯದ ಚಂದ್ರಯಾನ 3 ಯಶಸ್ವಿಯಾಗಲೆಂದು ಭಗವಂತನಲ್ಲಿ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net