

ಚಿತ್ರದುರ್ಗ:ಚಂದ್ರಯಾನ-3 ಲ್ಯಾಂಡರ್ ಯಶಸ್ವಿ ಲ್ಯಾಂಡಿಂಗ್ ಅಂಗವಾಗಿ ಚಿತ್ರದುರ್ಗ ಇನ್ನರ್‌ವೀಲ್ಹ್ ಕ್ಲಬ್ ಜ್ಞಾನದೀಪ ಶಾಲೆಯ ಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು. ಕ್ಲಬ್ ಅಧ್ಯಕ್ಷೆ ಮೋಕ್ಷಾ ರುದ್ರಸ್ವಾಮಿ, ಜ್ಞಾನದೀಪ ಶಾಲೆ ಕಾರ‌್ಯದರ್ಶಿ ನಾಗರತ್ನಬದ್ರಿನಾಥ್, ಕ್ಲ ಬ್ ಪದಾಧಿಕಾರಿಗಳು ಇದ್ದರು.
ಚಂದ್ರಯಾನ-3ರ ಯಶಸ್ಸಿಗೆ ಹರ್ಷ ವ್ಯಕ್ತಪಡಿಸಿ ಚಿತ್ರದುರ್ಗದ ವಾಸವಿ ಕ್ಲಬ್,ವಾಸವಿ ವಿದ್ಯಾಸಂಸ್ಥೆ ಹಾಗೂ ಆರ್ಯವೈಶ್ಯ ಸಂಘ ಮತ್ತಿತರ ಸಂಘ-ಸಂಸ್ಥೆಗಳಿಂದ ನಗರದ ಒನಕೆ ಓಬವ್ವ ವೃತ್ತದಲ್ಲಿ ಗುರುವಾರ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ವಾಸವಿ ಕ್ಲಬ್ ಅಧ್ಯಕ್ಷ ಎಲ್. ಆರ್. ಲಕ್ಷ್ಮಣ್,ಪಿ.ಎಲ್.ಸುರೇಶ್‌ರಾಜು,ತಿಪ್ಪೇಸ್ವಾಮಿ,ಲಿಂಗಂಶ್ರೀನಿವಾಸ್,ಎಸ್.ನಾಗರಾಜ್,ಕೋಟೇಶ್ವರಗುಪ್ತ,ವಾಸವಿ ವಿದ್ಯಾ ಸಂಸ್ಥೆ ಅಧ್ಯಕ್ಷ ಸತ್ಯನಾರಾಯಣಶೆಟ್ಟಿ, ಕಾರ‌್ಯದರ್ಶಿ ಅಜಯ್‌ಕುಮಾರ್ ಮತ್ತಿತರರು ಇದ್ದರು.
ಚಿತ್ರದುರ್ಗ ಸಿಎನ್‌ಸಿ ಪಿಯು ಕಾಲೇಜಿನಲ್ಲಿ ಗುರುವಾರ ಚಂದ್ರಯಾನ-3ರ ಯಶಸ್ಸನ್ನು ಸಂಭ್ರಮಿಸಲಾಯಿತು. ಕಾಲೇಜಿನ ಡೀನ್ ಗೋಪಾಲ್,ಪ್ರಾಚಾರ‌್ಯ ಬಿ.ನಾಗರಾಜ್,ಬೋಧಕ,ಬೋಧಕೇತರ ಹಾಗೂ ವಿದ್ಯಾರ್ಥಿಗಳು ಇದ್ದರು.