ಚಂದ್ರಯಾನ-3 ಯಶಸ್ವಿ ತಂಡದಲ್ಲಿ ಪ್ರಾಪ್ತಿ ಮಿತ್ತಲ್

26arsph3ep,,,,,
Published on

ಅರಸೀಕೆರೆ: ನಗರದ ಸಂತಮೇರಿ ಶಾಲೆಯ ಹಿರಿಯ ವಿದ್ಯಾರ್ಥಿನಿ ಹಾಗೂ ಇಸ್ರೋ ವಿಜ್ಞಾನಿ ಪ್ರಾಪ್ತಿ ಮಿತ್ತಲ್ ಚಂದ್ರಯಾನ-3ರ ಯಶಸ್ಸಿನಲ್ಲಿ ಭಾಗಿಯಾಗಿದ್ದು, ತಾಲೂಕಿನ ಕೀರ್ತಿಯನ್ನು ಬಾನೆತ್ತರಕ್ಕೆ ಹಾರಿಸಿದ್ದಾರೆ.

ಇವರು ರಾಜಸ್ಥಾನದ ಉದ್ಯಮಿ ರಾಜೀವ್ ಮಿತ್ತಲ್ ಹಾಗೂ ಸ್ವಪ್ನಾ ಮಿತ್ತಲ್ ಪುತ್ರಿಯಾಗಿದ್ದು, ಸಂತಮೇರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ದಶಕಗಳ ಹಿಂದೆ ವ್ಯಾಸಂಗ ಮಾಡಿದ್ದರು. ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಉನ್ನತ ವ್ಯಾಸಂಗ ಪೂರ್ಣಗೊಳಿಸಿದ್ದು ಇಸ್ರೋ ಅಧ್ಯಕ್ಷ ಸೋಮನಾಥ್ ತಂಡದೊಂದಿಗೆ ಸೇರಿ ಚಂದ್ರಯಾನ-3ರ ಯಶಸ್ಸಿಗೆ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಕ್ಷೇತ್ರದಲ್ಲಿ ಕೊಡುಗೆ ನೀಡಿದ್ದು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಚಂದ್ರಯಾನ-3ರ ಯಶಸ್ಸು ದೊರೆತ ಬಳಿಕ ಪ್ರಾಪ್ತಿ ಮಿತ್ತಲ್ ಭಾವಚಿತ್ರ ಎಲ್ಲೆಡೆ ವೈರಲ್ ಆಗಿದ್ದು ಕುಟುಂಬ ಸದಸ್ಯರು ಹಾಗೂ ಸಂಘ, ಸಂಸ್ಥೆಗಳ ಮುಖಂಡರು ಸಂತಸ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net