ಚಂದ್ರಯಾನ-3; ಕೇಕ್ ಕತ್ತರಿಸಿ ಸಂಭ್ರಮಾಚರಣೆ​

2308 Chincholi 01
Published on

ಚಿಂಚೋಳಿ: ಇಸ್ರೋ ಸಂಸ್ಥೆಯ ಚಂದ್ರಯಾನ-3 ಯಶಸ್ವಿಯಾಗಿದ್ದರಿಂದ ಪಟ್ಟಣ ಸೇರಿ ತಾಲೂಕಿನಾದ್ಯಂತ ಜನರು ಸಂಭ್ರಮಾಚರಣೆ ನಡೆಸಿದರು.

ಐನಾಪುರ ವಲಯದ ಹೇಮಲಾನಾಯಕ ತಾಂಡಾದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರೇಮಸಿಂಗ್ ಜಾಧವ್ ಅವರು ಕೇಕ್ ಕತ್ತರಿಸುವ ಮೂಲಕ ಚಂದ್ರಯಾನದ ಖುಷಿಯನ್ನು ಸಂಭ್ರಮಿಸಿದರು. ಇಸ್ರೋ ಹೊಸ ಮೈಲಿಗಲ್ಲು ಸೃಷ್ಟಿಸಿದ್ದು, ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ ಎಂದು ಖುಷಿ ವ್ಯಕ್ತಪಡಿಸಿದರು. ಪ್ರಜ್ವಲ್ ಜಾಧವ್, ರೋಹಿತ್ ಜಾಧವ್, ಶಾರದಾ ಚವ್ಹಾಣ್, ಶ್ರೀದೇವಿ ಚವ್ಹಾಣ, ಅಶ್ವಿನಿ ಜಾಧವ್, ಜ್ಯೋತಿ ಜಾಧವ್ ಇತರರಿದ್ದರು.

ಐನೋಳ್ಳಿ ಗ್ರಾಮದ ಬಸವೇಶ್ವರ ವೃತ್ತದ ಬಳಿ ಗ್ರಾಮಸ್ಥರು ತ್ರಿವರ್ಣ ಧ್ವಜವನ್ನು ಹಾರಿಸಿ ವಿಜಯೋತ್ಸವ ನಡೆಸಿದರು. ಇಸ್ರೋದ ವಿಕ್ರಮ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ಮೇಲೆ ಇಳಿಯುತ್ತಿದ್ದಂತೆ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಬಿಜೆಪಿ ಹಿರಿಯ ಮುಖಂಡ ಭೀಮಶೆಟ್ಟಿ ಮುರುಡಾ, ಪ್ರಮುಖರಾದ ಅಶೋಕ ಭಜಂತ್ರಿ, ನೀಲಕಂಠ ಹುಡಗಿ, ಗಂಗಾಧರ ಗುಡಸಲ್, ಜಗನ್ನಾಥ ಲೊಡ್ಡಾ, ಆಸೀಫ್ ಹುಡಾ, ನಾಗಪ್ಪ ತಳವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net