ಚಂದ್ರಮೌಳೀಶ್ವರನಿಗೆ ಶ್ರಾವಣ ಪೂಜೆ

1sri-2 A
Published on

ಶೃಂಗೇರಿ: ಶ್ರಾವಣ ಮಾಸದ ಪ್ರಥಮ ಸೋಮವಾರ ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ನರಸಿಂಹವನದ ಗುರುನಿವಾಸದಲ್ಲಿ ವಿಶೇಷ ಪೂಜೆ ನೆರವೇರಿಸಿದರು.

ಫಲ, ಪುಪ್ಪ, ಪಂಚಾಮೃತ ಅಭಿಷೇಕಗಳಿಂದ ಪೂಜೆ ಸಲ್ಲಿಸಿದ ಬಳಿಕ ಭವ್ಯವಾದ ಚಿನ್ನದ ಮಂಟಪದಲ್ಲಿ ಚಂದ್ರಮೌಳೀಶ್ವರ ಸ್ಪಟಿಕ ಲಿಂಗ, ರತ್ನಗರ್ಭ ಗಣಪತಿ, ಆದಿಶಂಕರಾಚಾರ್ಯರು, ಸರಸ್ವತಿ, ಮಹಾಲಕ್ಷ್ಮೀ, ಬಂಗಾರದ ಮತ್ತು ಸ್ಪಟಿಕದ ಶ್ರೀ ಚಕ್ರಗಳು, ಸೀತಾರಾಮ, ಗಣಪತಿ, ಜಗದ್ಗುರುಗಳಾದ ಶ್ರೀ ನೃಸಿಂಹಭಾರತೀ ಹಾಗೂ ಶ್ರೀಸಚ್ಚಿದಾನಂದ ಸ್ವಾಮೀಜಿಗಳ ಪಾದುಕೆಗಳಿಗೆ ಪೂಜೆ ಸಲ್ಲಿಸಿದರು.

ಆದಿಶಂಕರರ ಅಪ್ಪಣೆ: ಆದಿಶಂಕರ ಭಗತ್ಪಾದರು ಮಠದಲ್ಲಿ ಪ್ರತಿದಿನ ಭಗವತ್ ಆರಾಧನೆ ನಡೆಸುವ ಸಂಕಲ್ಪದಿಂದ ಶಾರದಾಂಬೆ ಹಾಗೂ ಚಂದ್ರಮೌಳೀಶ್ವರರ ಪೂಜೆ ನಡೆಸಬೇಕು ಎಂಬ ಅಪ್ಪಣೆ ಮಾಡಿ ಜಗದ್ಗುರು ಶ್ರೀ ಸುರೇಶ್ವರಾಚಾರ್ಯರಿಗೆ ಚಂದ್ರಮೌಳೀಶ್ವರ ಲಿಂಗ ಹಾಗೂ ರತ್ನಗರ್ಭ ಗಣಪತಿಯನ್ನು ನೀಡಿ ಅನುಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net