ಚಂದ್ರನ ಮೇಲೆ ಭಾರತಿಯ ಇಳಿಯಲಿದ್ದಾನೆ

49c86c72-9dcd-4129-b3fb-9d201b5d6e9e
Published on

ಬಾಗಲಕೋಟೆ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಅಪೂರ್ವ ಸಾಧನೆ ಮಾಡುತ್ತಿದೆ. ೨೦೩೫ ಕ್ಕೆ ನಮ್ಮದೆ ಆದ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸಿ ೨೦೪೦ ಕ್ಕೆ ಭಾರತಿಯರನ್ನು ಚಂದ್ರನ ಮೇಲೆ ಇಳಿಸಲಿದ್ದೇವೆ ಎಂದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೊ) ದ ಲೀಕ್ವಿಡ ಪ್ರಪಲ್ಶನ್ ಕೇಂದ್ರದ ನಿರ್ದೇಶಕ ಡಾ.ವಿ.ನಾರಾಯಣ ಹೇಳಿದರು.

ಮುಧೋಳದ ಬಿವಿವಿ ಸಂಘದ ಬೀಳೂರು ಗುರುಬಸವ ಮಹಾಸ್ವಾಮಿಜಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಬಾಹ್ಯಾಕಾಶ ಸಪ್ತಾಹ - ೨೦೨೩ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚಂದ್ರಯಾಣ ೩ರ ಯಶಸ್ವಿ ನಂತರ ೨೦೨೪ ಕ್ಕೆ ಚಂದ್ರನ ಮೇಲಿನ ಮಣ್ಣಿನ ಮಾದರಿ ತರುವುದು. ೨೦೨೫-೨೬ ಕ್ಕೆ ಭಾರತೀಯರನ್ನು ಬಾಹ್ಯಾಕಾಶಕ್ಕೆ ಕಳಿಸುವುದು. ೨೦೩೫ ಕ್ಕೆ ಭಾರತದ ಸ್ವತಂತ್ರ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸಿ ೨೦೪೦ ಕ್ಕೆ ಚಂದ್ರನ ಮೇಲೆ ಭಾರತೀಯರನ್ನು ಇಳಿಸಿ ಸುರಕ್ಷಿತವಾಗಿ ಕರೆತರಲಿದ್ದೇವೆ. ಈ ನಿಟ್ಟಿನಲ್ಲಿ ಇಸ್ರೋದ ೧೭೫೦೦ ಸಿಬ್ಬಂದಿಗಳು ಸತತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಕೇಂದ್ರದ ಉಪನಿರ್ದೇಶಕರಾದ ಕೆ ಶಾಂಬಯ್ಯ ಮಾತನಾಡಿ, ಉತ್ತರ ಕರ್ನಾಟಕದ ಮಕ್ಕಳಿಗೆ ಬಾಹ್ಯಾಕಾಶ ಜ್ಞಾನ ಅರಿವು ಮೂಡಿಸುವು ಉದ್ದೇಶದಿಂದ ಈ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ. ಇಂದಿನ ಮಕ್ಕಳು ಮುಂದೆ ಇಸ್ರೋದಲ್ಲಿ ಕೆಲಸ ಮಾಡಬಹುದಾಗಿದೆ. ಎಲ್ಲ ವಿಜ್ಞಾನಿಗಳು ಹಳ್ಳಿಯ ಬಡ ಕುಟುಂಬದಿಂದ ಬಂದಿದ್ದಾರೆ. ತಂದೆ ತಾಯಿ ಹಾಗೂ ಶಿಕ್ಷಕರಲ್ಲಿ ದೇವರನ್ನು ಕಾಣಿರಿ ಎಂದರು.

ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾರ್ಯಕಾರಣಿ ಮಂಡಳಿಯ ಕಾರ್ಯಾಧ್ಯಕ್ಷರಾದ ಮಹಾಂತೇಶ ಶೆಟ್ಟರ, ಮುಧೋಳ ತಾಲೂಕಿನ ವಲಯ ಶಿಕ್ಷಣ ಅಧಿಕಾರಿ ಎಸ್.ಎಂ.ಮುಲ್ಲಾ ಬಾಹ್ಯಾಕಾಶ ಸಪ್ತಾಹದ ಕಾರ್ಯಾಧ್ಯಕ್ಷ ಡಾ.ಎಂ.ಕಾರ್ತಿಕೇಯನ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶ್ರವಣಕುಮಾರ ಕೆರೂರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net