ಚಂದ್ರಗ್ರಹಣ: ಮೈಸೂರಿನಲ್ಲಿ ಶಾಂತಿ ಹೋಮ

mysore
Published on

ಮೈಸೂರು: ಚಂದ್ರಗ್ರಹಣ ಹಿನ್ನೆಲೆಯಲ್ಲಿ ನಗರದ ವಿವಿಧ ದೇವಸ್ಥಾನದಲ್ಲಿ ಹೋಮ ಸೇರಿದಂತೆ ವಿವಿಧ ಪೂಜಾ ಕಾರ್ಯಗಳನ್ನು ಸೋಮವಾರ ನೆರವೇರಿಸಲಾಯಿತು. ಜತೆಗೆ, ದೇವಸ್ಥಾನಗಳ ಶುದ್ಧಿ ಕಾರ್ಯವೂ ಜರುಗಿತು.

ಇರ್ವಿನ್ ರಸ್ತೆಯಲ್ಲಿರುವ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಲೋಕಕಲ್ಯಾಣಕ್ಕಾಗಿ ಹಾಗೂ ಭಕ್ತರ ಶ್ರೇಯಾಭಿವೃದ್ಧಿಗಾಗಿ ದೇವಸ್ಥಾನ ಶುದ್ಧಿ ಕಾರ್ಯ, ಪುಣ್ಯಃ, ನವಗ್ರಹ ಶಾಂತಿ ಹೋಮ, ಚಂದ್ರಗ್ರಹಣ ಶಾಂತಿ ಹೋಮ, ಗಣಪತಿ ಹೋಮ ನಡೆಯಿತು.

ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಅರ್ಚಕರಾದ ಕೃಷ್ಣಮೂರ್ತಿ, ಭಕ್ತವತ್ಸಲ ಸೇರಿದಂತೆ ಇನ್ನಿತರ ಅರ್ಚಕರು, ಭಕ್ತರು ಭಾಗಿಯಾಗಿದ್ದರು.

ನಂಜಬಹದ್ದೂರು ಛತ್ರದ ಬಳಿ ಇರುವ ಶ್ರೀ ಅಮೃತೇಶ್ವರ ದೇವಸ್ಥಾನದಲ್ಲೂ ವಿವಿಧ ಪೂಜೆಯನ್ನು ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net