

ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕೊಡಮಾಡುವ 2024ನೇ ಸಾಲಿನ ನೀಲಗಂಗಾ ದತ್ತಿ ಪ್ರಶಸ್ತಿಗೆ ಕೊಪ್ಪದ ಎಸ್.ಎನ್.ಚಂದ್ರಕಲಾ ಭಾಜನರಾಗಿದ್ದು, ಇತ್ತೀಚೆಗೆ ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ಚಂದ್ರಕಲಾ ಕೊಪ್ಪ ತಾಲೂಕು ದರ್ಶನ, ಚಿಲಿಪಿಲಿ, ಜ್ಞಾನ ದೀಪ್ತಿ, ಚಿರಂತನ ಹೀಗೆ ಇದುವರೆಗೆ 17 ಕೃತಿಗಳು, ನಿಯತಕಾಲಿಕೆಗಳಲ್ಲಿ 2000ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಆಕಾಶವಾಣಿ, ಸಾಹಿತ್ಯಗೋಷ್ಠಿಗಳು ಇತರ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ 1500ಕ್ಕೂ ಹೆಚ್ಚಿನ ಉಪನ್ಯಾಸಗಳನ್ನು ನೀಡಿದ್ದಾರೆ.