

ಚಿಂಚೋಳಿ: ಗಡಿ ತಾಲೂಕಿನ ಚಂದ್ರಂಪಳ್ಳಿ ಜಲಾಶಯವು 1972-73 ರಲ್ಲಿ ಅಂದಿನ ಮುಖ್ಯಮಂತ್ರಿ ದಿ. ವಿರೇಂದ್ರ ಪಾಟೀಲ್ ಅವರ ಕೊಡುಗೆ ಅವಿಸ್ಮರಣೀಯ ಎಂದು ಹಿರಿಯ ನ್ಯಾಯವಾದಿ ಶ್ರೀಮಂತ ಕಟ್ಟಿಮನಿ ಹೇಳಿದರು.
ಪಟ್ಟಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಂದ್ರಂಪಳ್ಳಿ ಜಲಾಶಯ ಅಭಿವೃದ್ಧಿಗೆ ಪೂರಕವಾದ ವಿಶೇಷ ಅನುದಾನ ಕಲ್ಪಿಸಬೇಕು. ಜಲಾಶಯದಿಂದ ಎಡ ಕಾಲುವೆ 21 ಕಿ.ಮೀ, ಬಲದಂಡೆ ಕಾಲುವೆ 14 ಕಿ.ಮೀ, ವಿಸ್ತರಣೆ ಹೊಂದಿದೆ. ಸುಮಾರು 5223 ಹೆಕ್ಟೇರ್ ಭೂ ಪ್ರದೇಶ ಹೊಂದಿದೆ. ಕೇವಲ 1200 ಹೆಕ್ಟೇರ್ ಭೂ ಪ್ರದೇಶ ಕ್ಕೂ ನೀರು ಹರಿಯುತ್ತಿಲ್ಲ. ಮುಖ್ಯ ಕಾಲುವೆ, ಮರಿಕಾಲುವೆ ದುರಸ್ಥಿ ಯಾಗಬೇಕು. ಕಟ್ಟಕಡೆಯ ರೈತರ ಜಮೀನುಗಳಿಗೆ ನೀರು ಹರಿಸಲು ಸರಕಾರ ಮುಂದಾಗಬೇಕು. ಜಲಾಶಯ ಉಳುವಿಗೆ ಶ್ರಮಿಸಬೇಕು. ಇಲ್ಲದಿದ್ದರೆ ಚಂದ್ರಂಪಳ್ಳಿ ಜಲಾಶಯ ರಕ್ಷಣಾ ಹೋರಾಟ ಸಮಿತಿ ಬೀದಿಗಿಳಿದು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ರೈತ ಮುಖಂಡ ಗೋಪಾಲರಾವ್ ಕಟ್ಟಿಮನಿ, ಭೀಮಶೇಟ್ಟಿ ಮುರುಡಾ, ರಾಜು ಪವಾರ್, ಶ್ರೀನಿವಾಸ ಗುತ್ತೇದಾರ ಸೇರಿದಂತೆ ಅನೇಕರು ಇದ್ದರು.