

ಯಾದಗಿರಿ: ಇಡೀ ವಿಶ್ವದ ಗಮನ ಸೆಳೆದಿದ್ದ ಚಂದ್ರಯಾನ-03 ಚಂದ್ರನ ಅಂಗಳಕ್ಕೆ ಯಶಸ್ವಿಯಾಗಿ ಇಳಿದ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾದ್ಯಂತ ಜನತೆ ಸಂಭ್ರಮಾಚರಣೆ ನಡೆಸಿದರು.
ನಗರ, ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಸಹ ಜನತೆ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಇಳಿಯಲಿ ಎಂದು ಬೆಳಗ್ಗೆಯಿಂದಲೇ ದೇವಸ್ಥಾನಗಳಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಲಾಗಿತ್ತು. ಸಂಜೆ 5.30ರಿಂದ 6.4ರ ವರೆಗೆ ಜನತೆ ಟಿವಿ ಹಾಗೂ ಮೊಬೈಲ್ಗಳಲ್ಲಿ ಚಂದ್ರಯಾನ-3 ಲ್ಯಾಂಡ್ನ ಕ್ಷಣಗಳನ್ನು ಅತ್ಯಂತ ಕುತೂಹಲದಿಂದ ವೀಕ್ಷಣೆ ಮಾಡಿದ್ದು ಕಂಡು ಬಂದಿತು. ಚಂದ್ರನ ನೆಲದಲ್ಲಿ ನೌಕೆ ಯಶಸ್ವಿಯಾಗಿ ಇಳಿದಿದ್ದೇ ತಡ ಎಲ್ಲೆಡೆ ಹಷರ್ೋದ್ಘಾರ ಕೇಳಿ ಬಂದಿತು. ವಂದೇ ಮಾತರಂ,ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಮೊಳಗಿದವು.
ನಗರದ ಸಕರ್ಾರಿ ಪದವಿ ಕಾಲೇಜಿನ ಮುಂಭಾಗದಲ್ಲಿನ ಆಂಜನೇಯ ದೇವಸ್ಥಾನ, ಭವಾನಿ ದೇವಸ್ಥಾನಗಳಲ್ಲಿ ಹೋಮ, ಹವನಗಳು ನಡೆದವು. ನಗರದ ಕೇಂದ್ರ ಬಸ್ ನಿಲ್ದಾಣ ಗಾಂ ವೃತ್ತದಲ್ಲಿ ವಿಕ್ರಂ ಲ್ಯಾಂಡರ್ ವೀಕ್ಷಣೆಗೆ ಬೃಹತ್ ಗಾತ್ರದ ಎಲ್ಇಡಿ ಪರದೆಗಳನ್ನು ಹಾಕಲಾಗಿತ್ತು. ಕಾಲೇಜು ವಿದ್ಯಾಥರ್ಿಗಳು ಇಸ್ರೋ ವಿಜ್ಞಾನಿಗಳ ಈ ಸಾಧನೆಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದರು.
ಹಿಂದು ಸೇವಾ ಸಮಿತಿ ಅಧ್ಯಕ್ಷ ಅಶೋಕ ವಾಟ್ಕರ್ ಮಾತನಾಡಿ, ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆಯಾಗಿ ಚಂದ್ರನ ದಕ್ಷಿಣ ಭಾಗದಲ್ಲಿ
ಸುರಕ್ಷಿತವಾಗಿ ಚಂದ್ರನ ಸ್ಪರ್ಶ ಆಗಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಇಡೀ ರಾಷ್ಟ್ರ ಮತ್ತು ಪ್ರಪಂಚದ ಎಲ್ಲ ದೇಶಗಳು ಕಾತುರದಿಂದ ಕಾದು ಕುಳಿತಿದ್ದ ಈ ದಿನ ಅವಿಸ್ಮರಣೀಯ, ಐತಿಹಾಸಿಕ ದಿನ ಸುವರ್ಣ ಅಕ್ಷರಗಳಲ್ಲಿ ಬರೆದುವಂಥದ್ದು ಎಂದರು.
ಟೋಕರಿ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದಶರ್ಿ ಉಮೇಶ ಮುದ್ನಾಳ್ ಮಾತನಾಡಿ, ಇತ್ತೀಚಿಗೆ ರಷ್ಯಾ ದೇಶದ ಚಂದ್ರಯಾನ ಉಡಾವಣೆ ವಿಫಲವಾದ ಮೇಲೆ, ಎಲ್ಲ ದೇಶಗಳ ಚಿತ್ತ ಭಾರತದತ್ತ ಕೇಂದ್ರೀಕರಿಸಲಾಗಿತ್ತು. ಇವತ್ತು ಇಡೀ ಜಗತ್ತು ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಂಡು ನಮ್ಮ ದೇಶದ ಹೆಮ್ಮೆಯ ವಿಜ್ಞಾನಿಗಳನ್ನು ಹೊಗಳುತ್ತಿರುವುದು ನೋಡುತ್ತಿದ್ದರೆ ನಮ್ಮ ದೇಶದ ಗರಿಮೆ ಪ್ರಪಂಚದಲ್ಲಿ ಎತ್ತರಕ್ಕೆ ಏರಿ ಒಂದು ಹೊಸ ಮೈಲಿಗಲ್ಲು ಸೃಷ್ಠಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಅಲ್ಲದೆ, ಜನತೆ ಮೊಬೈಲ್ ಮತ್ತು ಫೇಸ್ಬುಕ್ಗಳಲ್ಲಿ ಸ್ಟೇಟಸ್ ಇಟ್ಟುಕೊಳ್ಳುವ ಮೂಲಕ ಖುಷಿ ಹಂಚಿಕೊಂಡಿದ್ದು ವಿಶೇಷ ಎನಿಸಿತು.