ಚಂದಾ ಕೊಟ್ಟರೆ ಮೋದಿ ದಂಧಾ

mahesh ratod
Published on

ಕಲಬುರಗಿ: ಕೇಂದ್ರ ಬಿಜೆಪಿ ಸರ್ಕಾರ ಚುನಾವಣೆ ಬಾಂಡ್ ಮೂಲಕ ಭ್ರಷ್ಟಾಚಾರ ಅಧಿಕೃತಗೊಳಿಸಿ ಸಂಸತ್ ಮೂಲಕ ಕಾಯಿದೆ ಜಾರಿಗೆ ತಂದು ಚುನಾವಣೆ ಬಾಂಡ್ ನೀಡಿ ಹಣ ಪಡೆದು ನಮಗೆ ಚಂದಾ ಕೊಟ್ಟರೆ ದಂದಾ ಕೊಡುತ್ತೇನೆ ಎಂಬ ವ್ಯವಹಾರ ಮಾಡಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಹೇಶ ರಾಠೋಡ್ ಆರೋಪಿಸಿದರು. ಚುನಾವಣೆ ಬಾಂಡ್ ಬಿಜೆಪಿ ಬೃಹತ್ ಭ್ರಷ್ಟಾಕಾಂಡ ಎಂಬ ಕಿರು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ದೇಶದಲ್ಲಿ ೧೬ ಸಾವಿರ ಕೋಟಿಗೂ ಅಧಿಕ ಹಣ ವಿವಿಧ ರಾಜಕೀಯ ಪP್ಷÀಗಳು ಸಂಗ್ರಹಿಸಿವೆ. ಬಿಜೆಪಿ ಏಳು ಸಾವಿರ ಕೋಟಿಗೂ ಅಧಿಕ ಹಣ ಸಂಗ್ರಹಿಸಿರುವುದು ಅಸಂವಿಧಾನಿಕ ಎಂದು ಹೇಳಿದೆ ಎಂದು ಹೇಳಿದರು. ಎಲ್ಲರ ಮೇಲೆ ದಾಳಿ ಮಾಡುವ ಇಡಿ, ಐಟಿ ಇಲಾಖೆಯವರು ಏನು ಮಾಡುತ್ತಿz್ದÁರೆ ಎಂಬ ಪ್ರಶ್ನೆ ಕಾಡುತ್ತಿದೆ. ಭಾರತ್ ಕಮ್ಯುನಿಸ್ಟ್ ಪP್ಷÀ ಹಳೆ ಪ್ಯಾನ್ ಕಾರ್ಡ್ ನೀಡಿದ್ದಕ್ಕೆ ೧೧ಕೋಟಿ ರೂ. ದಂಡ ವಿಧಿಸಿz್ದÁರೆ. ಬಿಜೆಪಿಗೆ ಏಕೆ ನೋಟಿಸ್ ನೀಡಿಲ್ಲ. ದೇಶ ಇಡಿ, ಐಟಿಗಳನ್ನು ಕೇಂದ್ರ ಸರ್ಕಾರ ತನಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತಿದೆ. ಇಂತ ಭ್ರಷ್ಟಾಚಾರ ಸರ್ಕಾರವನ್ನು ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಬೇಕು. ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಕಾಂಗ್ರೆಸ್ ರಾಧಾಕೃಷ್ಣ ದೊಡ್ಡಮನಿ ಅವರನ್ನು ಬೆಂಬಲಿಸಬೇಕು ಎಂದು ಹೇಳಿದರು. ಪ್ರಮುಖರಾದ ಮೌಲಾ ಮು¯್ಲÁ, ಪ್ರಭುದೇವ ಯಳಸಂಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net