ಚಂದನ ವಾಹಿನಿಯ ಈ ವಾರದ ಅತಿಥಿ ದೇವರಾಜರೆಡ್ಡಿ

Devarajareddy
Published on

ಚಿತ್ರದುರ್ಗ: ಅಂತರ್ಜಲ ಮಟ್ಟ ಹೆಚ್ಚಿಸಲು ಅವಿರತ ಶ್ರಮಿಸುತ್ತಿರುವ ಜನಪ್ರಿಯ ಜಲ ವಿಜ್ಞಾನಿ, ಮಳೆ ನೀರು ಕೊಯ್ಲು ತಜ್ಞ ಎನ್.ಜೆ.ದೇವರಾಜರೆಡ್ಡಿ ಚಂದನ ವಾಹಿನಿಯಲ್ಲಿ ಈ ವಾರದ ಅತಿಥಿಯಾಗಿದ್ದು, ನ. 10ರಂದು ರಾತ್ರಿ 8ಕ್ಕೆ ಪ್ರಸಾರ, 12ರಂದು ರಾತ್ರಿ 8ಕ್ಕೆ ಮರು ಪ್ರಸಾರವಾಗಲಿದೆ.

ಕಳೆದ 37 ವರ್ಷಗಳಿಂದಲೂ ಜಲ ಸಂರಕ್ಷಣೆಯಲ್ಲಿ ತೊಡಗಿರುವ ದೇವರಾಜರೆಡ್ಡಿ 1 ಲಕ್ಷಕ್ಕೂ ಅಧಿಕ ಕೊಳವೆಬಾವಿ ಕೊರೆಸಿ ಜಲ ಯೋಧ ಸೇರಿ ಅವರ ಜಲ ಕಾಳಜಿ ಗುರುತಿಸಿ ಹತ್ತಾರು ಪ್ರಶಸ್ತಿಗಳು ಅರಸಿ ಬಂದಿವೆ.

ಕೃಷಿ ಭೂಮಿಯಲ್ಲಿ ಎಲೆ ಬಳ್ಳಿ ಒಣಗುವುದನ್ನು ಚಿಕ್ಕ ವಯಸ್ಸಿನಲ್ಲಿಯೇ ಕಣ್ಣಾರೆ ಕಂಡ ಅವರಿಗೆ ಬರದ ದಿನಗಳು ದೊಡ್ಡ ಪಾಠ ಕಲಿಸಿವೆ. ನದಿ, ಕೆರೆಗಳು ಕಲುಷಿತಗೊಂಡು ಅಂತರ್ಜಲ ಬರಿದಾಗಿರುವ ಇಂದಿನ ಕಠಿಣ ಪರಿಸ್ಥಿತಿಯಲ್ಲಿ ಭೂಮಿ ಮೇಲೆ ಶುದ್ಧವಾಗಿರುವುದೆಂದರೆ ಮಳೆ ನೀರು ಮಾತ್ರ ಎನ್ನುವ ಜಾಗೃತಿಯನ್ನು ಜನರಲ್ಲಿ ಮೂಡಿಸುತ್ತಿದ್ದಾರೆ.

ಜಲಸಂರಕ್ಷಣೆಗಾಗಿಯೇ ಜೀವನ ಮುಡುಪಾಗಿಟ್ಟಿರುವ ಇವರ ಪ್ರಾಮಾಣಿಕ ಸೇವೆ ಗುರುತಿಸಿ ಕೊಳವೆಬಾವಿ ಎಲ್ಲಿದೆಯೋ ಅಲ್ಲಿದೆ ಆರೋಗ್ಯ ಎನ್ನುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿತು. ಚಿತ್ರದುರ್ಗದ ಕೋಟೆಯಲ್ಲಿದ್ದ ಒಂದು ಲಕ್ಷ ಸೈನಿಕರಿಗೆ ಮಳೆ ನೀರು ಆಶ್ರಯವಾಗಿತ್ತು. ಈಗ ಎಷ್ಟು ಬೋರ್‌ವೆಲ್ ಕೊರೆಸಿದರೂ ನೀರು ಸಾಕಾಗುತ್ತಿಲ್ಲ. ಲಕ್ಷಾಂತರ ಕೊಳವೆಬಾವಿ ಕೊರೆಸಿರುವ ಪಾಪ ಪ್ರಜ್ಞೆ ನನ್ನನ್ನು ಕಾಡುತ್ತಿದೆ ಎನ್ನುವ ಅವರ ಮನದಾಳದ ಆತಂಕವನ್ನು ನೆಚ್ಚಿನ ಚಂದನ ವಾಹಿನಿಯಲ್ಲಿ ವೀಕ್ಷಿಸಿ ಜಲ ಉಳಿಸಿ ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net