ಚಂಚಲ ಮನಸ್ಸು ಗುರಿ ಸಾಧನೆಗೆ ಅಡ್ಡಿ

CTD SARASWATI--005
Published on

ಚಿತ್ರದುರ್ಗ: ಮುಂದೆ ಏನಾಗಬೇಕೆಂಬುದನ್ನು ವಿದ್ಯಾರ್ಥಿಗಳೇ ನಿರ್ಧರಿಸಿಕೊಳ್ಳಬೇಕೆಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರೋಣ ವಾ ಸುದೇವ ಅವರು ಹೇಳಿದರು. ನಗರದ ಸರಸ್ವತಿ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ ಕಾಲೇಜು ಸಂಸ್ಥಾಪನಾ ದಿನಾಚರಣೆ ಉದ್ಘಾಟಿ ಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ಒಮ್ಮೆ ಕಳೆದು ಹೋದರೆ ಮತ್ತೆ ಸಿಗದು,ಮುಂದಿನ ನಮ್ಮ ಬದುಕು ಹೇಗಿರ ಬೇಕೆಂಬುದ ನ್ನು ವಿದ್ಯಾರ್ಥಿಗಳೇ ನಿರ್ಧರಿಸಿಕೊಳ್ಳ ಬೇಕು.
ಜೀವನದಲ್ಲಿ ಯಾರಿಗೂ ಕಾಯಿಸಬಾರದು,ಯಾರನ್ನ್ನೂ ಕಾಯಬಾರದು ಎನ್ನುವ ಸಿದ್ಧಾಂತವಿರಬೇಕು. ಶಬ್ಧವೇದಿ ಶಕ್ತಿಗೆ ಏಕಲವ್ಯನ ಲ್ಲಿದ್ದ ಏಕಾಗ್ರತೆ ಕಾರಣವಾಯಿತು. ಓದಿನ ಕಡೆ ಸಂಪೂರ್ಣವಾಗಿ ಗಮನ ಕೊಟ್ಟರೆ ಯಶಸ್ಸು ಸಾಧ್ಯ. ಮನಸ್ಸು ಚಂಚಲವಾಗಬಾರದು. ಕಾನೂನು ವಿದ್ಯಾರ್ಥಿಗಳಾದ ತಮಗೆ ಒಳ್ಳೆಯ ವಕೀಲರು,ನ್ಯಾಯಾಧೀಶರಾಗಲು ಅವಕಾಶವಿದೆ.
ಯುಪಿಎಸ್‌ಸಿ,ಕೆಪಿಎಸ್ ಪರೀಕ್ಷೆಗಳಲ್ಲಿ ತೇರ್ಗಡೆಯಾದರೆ ಉನ್ನತ ಮಟ್ಟದ ಅಧಿಕಾರಿಗಳಾಬಹುದಾಗಿದ್ದು,ಆಯ್ಕೆ ನಿಮ್ಮ ಕೈಯಲ್ಲಿದೆ. ಶಿಕ್ಷಣ ಎಲ್ಲರ ಮೂಲ ಹಕ್ಕು. ಕಠಿಣ ಪರಿಶ್ರಮವಿಲ್ಲದಿದ್ದರೆ ಗುರಿ ಮುಟ್ಟಲು ಸಾಧ್ಯವಿಲ್ಲ. ಮೊಬೈಲ್‌ನಿಂದ ಯುವ ಪೀಳಿಗೆ ಹಾಳಾಗುತ್ತಿದೆ. ಕಾನೂನು ಶಿಕ್ಷಣ ಪಡೆಯುವಾಗ ನ್ಯಾಯಾಲಯ ಕಲಾಪಗಳನ್ನು ವೀಕ್ಷಿಸ ಬೇಕೆಂದರು.
ಎಎಸ್‌ಪಿ ಎಚ್.ಜೆ.ಕುಮಾರಸ್ವಾಮಿ ಮಾತನಾಡಿ,ಸ್ವಾವಲಂಬಿ ಬದುಕಿಗೆ ನೂರಾರು ಅವಕಾಶಗಳಿವೆ. ಪಾಲಕರ ನಂಬಿಕೆ ಹಾಳು ಮಾಡ ಬೇಡಿ. ಸಾಮಾಜಿಕ ಜಾಲ ತಾಣಗಳ ವೀಕ್ಷಣೆಗೆ ಸಮಯ ನಿಗದಿ ಪಡಿಸಿಕೊಳ್ಳ ಬೇಕಿದೆ ಎಂದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಚ್.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಫಾತ್ಯರಾಜನ್,ಕಾರ‌್ಯದರ್ಶಿ ಡಿ.ಕೆ.ಶೀಲಾ,ಪ್ರಾಚಾರ‌್ಯೆ ಎಂ.ಎಸ್.ಸುಧಾದೇವಿ,ಆಡಳಿತಾಧಿಕಾರಿ ಡಿ.ಎಚ್.ನಟರಾಜ್,ನಿ ವೃತ್ತ ಡಿವೈಎಸ್ಪಿ ಅಬ್ದುಲ್‌ರೆಹಮಾನ್ ಇದ್ದರು. ಚೈತ್ರಾ ಪ್ರಾರ್ಥಿಸಿದರು. ಡಾ.ಎನ್.ಡಿ.ಗೌಡ ಸ್ವಾಗತಿಸಿ,ಡಾ.ಡಿ.ಬಿ.ರವಿಕುಮಾರ್ ವಂದಿಸಿ ದರು. ದೈಹಿಕ ಶಿಕ್ಷಣ ನಿರ್ದೇಶಕ ಪಿ.ಸಿ.ಮುರುಗೇಶ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net