

ಚಾಮರಾಜನಗರ: ತಾಲೂಕಿನ ವೆಂಕಟಯ್ಯಛತ್ರ ಹಾಗೂ ವಿ.ಸಿ.ಹೊಸೂರು ಗ್ರಾಮದಲ್ಲಿ ಶ್ರೀಚಂಗೂರು ಮಾರಮ್ಮನ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ಸೋಮವಾರ ಸಂಜೆ 11 ಗಂಟೆಗೆ ಗ್ರಾಮದ ಮುಖ್ಯ ದ್ವಾರದಿಂದ ಮಂಗಳ ವಾದ್ಯ, ನಗಾರಿ, ಬ್ಯಾಂಡ್ ಸೆಟ್, ಸತ್ತಿಗೆ ಸೂರಪಾನಿ ವಿವಿಧ ಕಲಾತಂಡಗಳೊಂದಿಗೆ ಗ್ರಾಮ ದೇವರ ಮೆರವಣಿಗೆ ನಡೆಯಿತು. ಬಳಿಕ ಹಾಲರವಿ ಉತ್ಸವ ಪ್ರಮುಖ ಬೀದಿಗಳಲ್ಲಿ ಸಾಗಿ ದೇವಸ್ಥಾನದಲ್ಲಿ ಅಂತ್ಯಗೊಂಡಿತು.
ನಂತರ ಗ್ರಾಮದ ಎಲ್ಲ ಜನಾಂಗದ ಜನರು ತಂಪನ್ನು ತರುವ ಮುಖಾಂತರ ವಿಶೇಷ ಪೂಜೆ ಪುನಸ್ಕಾರಗಳನ್ನು ನೆರವೇರಿಸಿದರು. ಜಾತ್ರಾ ಮಹೋತ್ಸವದ ಪ್ರಯುಕ್ತ ಗ್ರಾಮದ ದೇವತೆಗೆ ಫಲ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.