

ನುಗ್ಗೇಹಳ್ಳಿ: ಸುರಕ್ಷತೆ ದೃಷ್ಟಿಯಿಂದ ಸಾರ್ವಜನಿಕರು ಕೆಎಸ್‌ಆರ್‌ಟಿಸಿ ಸಾರಿಗೆ ಬಸ್‌ಗಳಲ್ಲಿ ಸಂಚರಿಸುವುದರಿಂದ ಹೆಚ್ಚು ಅಪಘಾತಗಳಾಗುವುದಿಲ್ಲ. ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವುದು ಕ್ಷೇಮ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಸಮೀಪದ ಗಿರೀಕ್ಷೇತ್ರದ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲದ ಮುಂಭಾಗ ಚನ್ನರಾಯಪಟ್ಟಣ ಡಿಪೋದಿಂದ ತುರುವೇಕೆರೆಗೆ ಆರಂಭವಾಗಿರುವ ಸಾರಿಗೆ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರಿ ಬಸ್‌ಗಳಲ್ಲಿ ಸಂಚರಿಸುವುದರಿಂದ ಸುರಕ್ಷತೆ ಸಂಚಾರದ ಜತೆಗೆ ನಿಗಮಕ್ಕೂ ಹೆಚ್ಚು ಲಾಭವಾಗುತ್ತದೆ. ಚನ್ನರಾಯಪಟ್ಟಣದಿಂದ ಬೆಳಗ್ಗೆ 9.30 ಗಂಟೆಗೆ ಬಸ್ ಹೊರಟು ಕಲ್ಕೆರೆ, ನುಗ್ಗೇಹಳ್ಳಿ, ಅಕ್ಕನಹಳ್ಳಿ ವೃತ್ತ, ಗಿರಿಕ್ಷೇತ್ರ ದಿಡಗ ಮಾರ್ಗ ಪಕ್ಕದ ತಾಲೂಕು ತುರುವೇಕೆರೆಗೆ 11. 10 ಗಂಟೆಗೆ ತಲುಪಲಿದೆ. ಮತ್ತೆ ಅದೇ ಮಾರ್ಗ ಚನ್ನರಾಯಪಟ್ಟಣಕ್ಕೆ ಹಿಂದಿರುಗುತ್ತದೆ ಎಂದು ತಿಳಿಸಿದರು.
ಸಂಚಾರ ನಿಯಂತ್ರಕ ಜಗದೀಶ್, ಮುಖಂಡರಾದ ದಾಸರಹಳ್ಳಿ ಎನ್.ಕುಮಾರಸ್ವಾಮಿ, ದೇವರಾಜು, ನಾಗರಾಜ್, ರಾಜೇಗೌಡ, ರಾಮಣ್ಣ, ವೆಂಕಟೇಶ್‌ಗೌಡ, ದುಗ್ಗೇನಹಳ್ಳಿ ಬಸವೇಗೌಡ, ವೆಂಕಟೇಶ್, ನಿವೃತ್ತ ಶಿಕ್ಷಕ ಕೆಂಪಯ್ಯ, ಉಂಗರಗೆರೆ ನಾರಾಯಣ, ನಟರಾಜ್, ಕಬ್ಬಳಿ ಶಿವನಂಜೇಗೌಡ, ಪೃಥ್ವಿ ಕುಮಾರ್, ಪಿಡಿಒ ಕಿರಣ್, ಕಾರ್ಯದರ್ಶಿ ಹನುಮೇಗೌಡ ಇತರರು ಹಾಜರಿದ್ದರು.