ಘಾಳಪೂಜಿಗೆ ಡಿಎಸ್‌ಪಿ ಭೇಟಿ

DSP visit to Ghalapuji
ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾದ ನಾಲತವಾಡ ಸಮೀಪದ ಘಾಳಪೂಜಿಯ ಸ್ಥಳಕ್ಕೆ ಡಿಎಸ್‌ಪಿ ಕರುಣಾಕರ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Published on

ನಾಲತವಾಡ: ದಲಿತ ಮಹಿಳೆಯ ಮೇಲೆ ಅತ್ಯಾಚಾರ ಹಾಗೂ ಕೊಲೆಯ ದೂರು ದಾಖಲಾಗಿರುವುದರಿಂದ ಇಲ್ಲಿಗೆ ಸಮೀಪದ ಘಾಳಪೂಜಿ ಗ್ರಾಮಕ್ಕೆ ಮಂಗಳವಾರ ಡಿಎಸ್‌ಪಿ ಕರುಣಾಕರ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು.

ಮುದ್ದೇಬಿಹಾಳ ಪೊಲೀಸ್ ಠಾಣೆಯ ಪಿಎಸ್‌ಐ ಆರೀಫ್ ಮುಷಾಪುರಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಕೊಂಡಿದ್ದಾರೆ. ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆಯ ಕಲಂಗಳು ಎಫ್‌ಐಆರ್‌ನಲ್ಲಿ ಬಳಕೆ ಆಗಿದ್ದರಿಂದ ಠಾಣೆಗೆ ಮತ್ತು ಘಟನಾ ಸ್ಥಳಕ್ಕೆ ಬಸವನಬಾಗೇವಾಡಿ ಡಿಎಸ್‌ಪಿ ಕರುಣಾಕರ ಶೆಟ್ಟಿ, ಪಿಎಸ್‌ಐ ಆರೀಪ್ ಮುಶಾಪುರಿ, ಎ.ವೈ. ಸಾಲಿ, ಪಿ.ಎಸ್. ಪಾಟೀಲ ಇತರರು ಸ್ಥಳದಲ್ಲಿದ್ದ ದಲಿತ ಮುಖಂಡರಿಂದ ಘಟನೆಯ ಕುರಿತು ಅವರು ಮಾಹಿತಿ ಪಡೆದರು.

ಮುರಾರ್ಜಿ ದೇಸಾಯಿ ವಸತಿ ಶಾಲೆಯ ಬಡ ಕುಟುಂಬ ಸಂಗಪ್ಪ ಚಲವಾದಿ ಅವರ ಪತ್ನಿಗೆ ನ್ಯಾಯ ಸಿಗಬೇಕು ಎಂದು ನಾನಾ ದಲಿತ ಸಂಘಟಕರು ಒತ್ತಾಯಿಸಿದರು. ಕಳೆದ ಹಲವು ವರ್ಷಗಳಿಂದ ಸಂಗಪ್ಪ ಹಾಗೂ ಪತ್ನಿ ಕೆಲಸ ಮಾಡುತ್ತಿದ್ದರು. ದೌರ್ಜನ್ಯಕ್ಕೊಳಗಾದ ಮೃತ ಭೀಮಾಬಾಯಿಗೆ ಚಿಕ್ಕಮಕ್ಕಳಿದ್ದಾರೆ. ನೊಂದ ಸಂಗಪ್ಪನಿಗೆ ಸರ್ಕಾರಿ ನೌಕರ ನೀಡಬೇಕು. ಗ್ರಾಮದಲ್ಲಿ ದಲಿತರಿಗೆ ರಕ್ಷಣೆ ನೀಡಬೇಕು ಎಂದು ಸ್ಥಳದಲ್ಲಿದ್ದ ಮುಖಂಡರಾದ ಬಸವರಾಜ ಚಲವಾದಿ, ಮಂಜು ಕಟ್ಟಿಮನಿ, ಸುಭಾಷ ಚಲವಾದಿ, ಬಸವರಾಜ ಅಚನೂರ, ಸಿದ್ದಪ್ಪ ಚಲವಾದಿ, ಭೀಮಣ್ಣ ಲೊಟಗೇರಿ, ವೀರೇಶ ಚಲವಾದಿ, ಶರಣಪ್ಪ ಚಲವಾದಿ, ಗುರುಬಸಪ್ಪ ಚಲವಾದಿ, ಮುದಿಯಪ್ಪ ಚಲವಾದಿ ಡಿಎಸ್‌ಪಿ ಅವರನ್ನು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net