

ವಿಜಯಪುರ: ಸ್ವ ಸಹಾಯ ಸಂಘದ ಮಹಿಳೆಯರಿಗೆ ಘನ ತ್ಯಾಜ್ಯ ನಿರ್ವಹಣಾ ಘಟಕಗಳ ನಿರ್ವಹಣೆ ಹಾಗೂ ಕಾರ್ಯಚರಣೆ ಕುರಿತು ನಾಲ್ಕು ದಿನಗಳ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ವಿಜಯಪುರ ಜಿಲ್ಲಾ ಪಂಚಾಯತಿ ಅಡಿಯಲ್ಲಿರುವ ಎನ್ ಆರ್ ಎಲ್ ಎಂ, ಎಸ್ ಡಬ್ಲೂ ಎಂ ವಿಭಾಗ ಮತ್ತು ಐ ಆರ್ ಡಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ರುಡ್ ಸೆಟ್ ಸಂಸ್ಥೆ ವಿಜಯಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ತರಬೇತಿಯನ್ನು ನಡೆಸಲಾಯಿತು. ಅಗಸ್ಟ್ 16ರಿಂದ 19ರ ವರೆಗೆ ನಾಲ್ಕು ದಿನಗಳ ಕಾಲ ವಿಜಯಪುರ ನಗರದಲ್ಲಿರುವ ರುಡಸೆಟ್ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ತರಬೇತಿಯಲ್ಲಿ, ಸ್ವಸಹಾಯ ಸಂಘದ ಮಹಿಳೆಯರಿಗೆ ಘನ ತ್ಯಾಜ್ಯ ನಿರ್ವಹಣಾ ಘಟಕಗಳ ನಿರ್ವಹಣೆ ಹಾಗೂ ಕಾರ್ಯಚರಣೆ ಕುರಿತು ತಿಳುವಳಿಕೆ ನೀಡಲಾಯಿತು. ನಾಲ್ಕು ದಿನದ ತರಬೇತಿಯಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕ ಮತ್ತು ಜೈವಿಕ ಇಂಧನ ಘಟಕಗಳ ವೀಕ್ಷಣೆ ಮಾಡಿಸಿ ತಿಳುವಳಿಕೆ ನೀಡಲಾಯಿತು. ಅಗಸ್ಟ್ 17ರಂದು ಕೃಷಿ ವಿಶ್ವವಿದ್ಯಾಲಯ ವಿಜಯಪುರ, 18ರಂದು ಚವಡಿಹಾಳ ಮತ್ತು ತೆನ್ನಿಹಳ್ಳಿ ಗ್ರಾಮ ಪಂಚಾಯತಿಗಳ ಘನ ತ್ಯಾಜ್ಯ ಘಟಕಗಳ ವೀಕ್ಷಣೆ ಮಾಡಿಸಲಾಯಿತು. 19ರಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿ ತ್ಯಾಜ್ಯ ನಿರ್ವಹಣೆಯ ಕುರಿತು ಅರಿವು ಮೂಡಿಸಲಾಯಿತು. ತರಬೇತಿ ಶಿಬಿರ ಮುಕ್ತಾಯದ ವೇಳೆ ತರಬೇತಿಯಲ್ಲಿ ಪಾಲ್ಗೊಂಡವರಿಗೆಲ್ಲ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐ ಆರ್ ಡಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಾಬು ಸಜ್ಜನ ವಹಿಸಿಕೊಂಡಿದ್ರು. ಹಾಗೂ ಮುಖ್ಯ ಅತಿಥಿಗಳಾಗಿ ರುಡ್ ಸೆಟ್ ಸಂಸ್ಥೆಯ ರಾಜೇಂದ್ರ ಜೈನಾಪುರ, ವಿಜಯಕುಮಾರ ಎಂ ಜಿ ಐ ಆರ್ ಡಿ ಬೆಂಗಳೂರು ಆಗಮಿಸಿದ್ರು. ತರಬೇತಿ ಸಂಯೋಜಕ ಸಂತೋಷ ಕೋರ್ತಿ ಸೇರಿದಂತೆ ಜಿಲ್ಲಾ ಪಂಚಾತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ರು.