ಘಟಿಕೋತ್ಸವ ಕಾರ್ಯಕ್ರಮ

20220827_113959
Published on

ಮೈಸೂರು: ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗವು 2021-22ನೇ ಶೈಕ್ಷಣಿಕ ವರ್ಷದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.


ಉದ್ಯಮಿ ಎಸ್.ನಾಗರಾಜನ್ ಮಾತನಾಡಿ, ಕಾರ್ಪೋರೇಟ್ ಜಗತ್ತಿಗೆ ತಕ್ಕಂತೆ ವಿದ್ಯಾರ್ಥಿಗಳು ಹೊಂದಿಕೊಳ್ಳಬೇಕು. ಕೌಶಲಾಭಿವೃದ್ಧಿಗೆ ಒತ್ತು ನೀಡಬೇಕು ಎಂದರು. ಎಂಇಟಿ ಅಧ್ಯಕ್ಷ ಡಾ.ಎಸ್.ಮುರಳಿ, ಕಾರ್ಯದರ್ಶಿ ಡಾ.ಟಿ.ವಾಸುದೇವ್, ಪ್ರಾಂಶುಪಾಲ ಡಾ.ಬಿ.ಜಿ.ನರೇಶ್‌ಕುಮಾರ್, ಆಡಳಿತಾಧಿಕಾರಿ ಎ.ಎಂ.ಅನಿರುದ್ಧ, ಇಸಿಇ ಮುಖ್ಯಸ್ಥ ಡಾ.ರವಿಚಂದ್ರ ಸೇರಿದಂತೆ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net