ಗ್ರೇಡ್-1 ನಗರಸಭೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ

IMG_20241226_122834
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.42064816, 0.16583334);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;
Published on

ಚಾಮರಾಜನಗರ: ನಗರಸಭೆ ವ್ಯಾಪ್ತಿಯ 31 ವಾರ್ಡುಗಳಲ್ಲಿರುವ ಜನಸಂಖ್ಯೆಯು 90 ಸಾವಿರ ಮೀರಿದ್ದು, ಸನಿಹದಲ್ಲಿರುವ ಗ್ರಾಮಗಳನ್ನು ಸೇರ್ಪಡೆ ಮಾಡಿಕೊಂಡು ಗ್ರೇಡ್-1 ನಗರಸಭೆಯನ್ನಾಗಿರಿಸಿ, ಅಭಿವೃದ್ದಿಯ ವೇಗವನ್ನು ಹೆಚ್ಚಿಸುವ ಸಲುವಾಗಿ ರಾಜ್ಯ ಸರ್ಕಾರಕ್ಕೆ ನಗರಸಭೆಯಿಂದ ಪ್ರಸ್ತಾವನೆಯನ್ನು ಸಲ್ಲಿಸುವುದಾಗಿ ನಗರಸಭೆ ಅಧ್ಯಕ್ಷ ಸುರೇಶ್ ತಿಳಿಸಿದರು.

ನಗರದ ಸಿಡಿಎಸ್ ಭವನದಲ್ಲಿ 2024-25ನೇ ಸಾಲಿನ ಪರಿಷ್ಕೃತ ಹಾಗೂ 2025-26ನೇ ಸಾಲಿನ ಅಯವ್ಯಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರಸಭೆಗೆ ಈಗ ಸರ್ಕಾರದಿಂದ ಬರುತ್ತಿರುವ ಅನುದಾನ ಬಹಳ ಕಡಿಮೆ ಇದ್ದು, ಪಟ್ಟಣದ ಸಮಗ್ರ ಅಭಿವೃದ್ದಿಗಾಗಿ ಹಾಗೂ ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕಷ್ಟಸಾಧ್ಯವಾಗುತ್ತದೆ. ಅಲ್ಲದೇ ಜಿಲ್ಲಾ ಕೇಂದ್ರವಾದ ಬಳಿಕ ನಗರಸಭೆ ವ್ಯಾಪ್ತಿ ಗೆ ಬರುವಂತೆ ಮಲ್ಲಯ್ಯನಪುರ, ಉತ್ತುವಳ್ಳಿ, ಯಡಪುರ ಹಾಗು ವೈದ್ಯಕೀಯ ಕಾಲೇಜು ಸೇರಿದಂತೆ ಅನೇಕ ಗ್ರಾಮಗಳನ್ನು ಒಳಪಡಿಸಿಕೊಂಡು ಗ್ರೇಡ್ -1 ನಗರಸಭೆ ಮಾಡಲು ಎಲ್ಲಾ ರೀತಿಯ ಪ್ರಯತ್ನವನ್ನು ನಗರಸಭೆಯಿಂದ ಕೈಗೊಳ್ಳಲಾಗಿದೆ ಎಂದರು.

ಗ್ರೇಡ್-1 ನಗರಸಭೆಯನ್ನಾಗಿಸಲು ಸುಮಾರು 1 ಲಕ್ಷಕ್ಕು ಅಧಿಕ ಜನಸಂಖ್ಯೆ ಇರಬೇಕು. ಕರ್ನಾಟಕ ಮುನಿಸಿಪಾಲಿಟಿ ಕಾಯ್ದೆ ಪ್ರಕಾರ ಹಿಂದಿನ ಜನಗಣತಿ ಆಧಾರದಲ್ಲಿ ಸ್ಥಳೀಯ ಆಡಳಿತ ದರ್ಜೆಯನ್ನು ನಿಗಧಿಪಡಿಸಲಾಗುತ್ತದೆ. ಅದಕ್ಕಾಗಿ ಸಮೀಪದಲ್ಲಿರುವ ಹಳ್ಳಿಗಳನ್ನು ನಗರಸಭೆ ವ್ಯಾಪ್ತಿಗೆ ಒಳಪಡಿಲಾಗುತ್ತದೆ. ಗ್ರೇಡ್-1 ನಗರಸಭೆಯಾದರೆ ಪೌರಾಡಳಿತ ಸಚಿವಲಾಯದಿಂದ ಹೆಚ್ಚಿನ ಅನುದಾನ ಮತ್ತು ಕರ ವಸೂಲಾತಿ ಹೆಚ್ಚಳವಾಗುತ್ತದೆ. ಅಲ್ಲದೇ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳು ಹೆಚ್ಚು ಬರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಗರಸಭೆಯನ್ನು ಮೇರ್ಲ್ದಜೆಗೇರಿಸಲು ಪ್ರಸ್ತಾವನೆಯನ್ನು ಸಲ್ಲಿಸಲು ತೀರ್ಮಾನಿಸಲಾಗುತ್ತದೆ ಎಂದು ಸುರೇಶ ತಿಳಿಸಿದರು.

ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಉಪಯುಕ್ತ ಹಾಗೂ ಅಭಿವೃದ್ದಿ ಪೂರಕವಾದ ಸಲಹೆ ಸೂಚನೆಗಳನ್ನು ನೀಡಿದ್ದು, ಸದ್ಯದಲ್ಲಿಯೇ ಸದಸ್ಯರ ಪೂರ್ವಭಾವಿಯಲ್ಲಿ ಬರುವ ಸಲಹೆ ಸೂಚನೆಗಳನ್ನು ಕ್ರೋಡೀಕರಿಸಿ, ಅಭಿವೃದ್ದಿ ಹಾಗೂ ಜನಪರ ಬಜೆಟ್ ಮಂಡಿಸಿವುದಾಗಿ ತಿಳಿಸಿದರು.

2025-26ನೇ ಸಾಲಿನ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ನಗರಸಭೆಗೆ ಬರಬಹುದಾದ ಆದಾಯದ ಮೂಲಗಳು ಹಾಗೂ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಗಳ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.

ಮುಖಂಡ ಸುರೇಶ್ ವಾಜಪೇಯಿ ಮಾತನಾಡಿ, ಜಿಲ್ಲೆಯಾಗಿ 26 ವರ್ಷ ಕಳೆದಿದೆ. ನಗರಸಭೆ ವ್ಯಾಪ್ತಿಯಲ್ಲಿ ನೀರಿನ ಕಂದಾಯವನ್ನು ಸಮರ್ಪಕವಾಗಿ ವಸೂಲಿ ಮಾಡುತ್ತಿಲ್ಲ. ನೀರಿನ ಕಂದಾಯದ ಜೊತೆಗೆ ವಾಣಿಜ್ಯ ಕಟ್ಟಡಗಳಿಂದಲೂ ತೆರಿಗೆ ವಸೂಲಿ, ಅಲ್ಲದೆ ಇ ಸ್ವತ್ತು ವಿಳಂಬ ಮಾಡಬಾರದು. 31 ವಾರ್ಡ್ಗಳಲ್ಲೂ ರಸ್ತೆ ಹದಗೆಟ್ಟಿದ್ದು ರಸ್ತೆ, ಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಪೌರಾಯುಕ್ತ ರಾಮದಾಸ್ ಮಾತನಾಡಿ, ಸಾರ್ವಜನಿಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ನೀಡಿರುವ ಸಲಹೆ ಸೂಚನೆಗಳನ್ನು ಸದಸ್ಯರ ಸಭೆಯಲ್ಲಿ ಮಂಡಿಸಿ ಕ್ರೋಡೀಕರಣ ಮಾಡಿ ಅಭಿವೃದ್ಧಿಪರ ಬಜೆಟ್ ಮಂಡಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಮಮತಾಬಾಲಸುಬ್ರಮಣ್ಯ, ಲೆಕ್ಕ ಅಧೀಕ್ಷಕ ಜಯನಾಯಕ್, ಎಇಇಗಳಾದ ನಟರಾಜು, ರೂಪ, ಸಮುದಾಯ ಸಂಘಟನಾಧಿಕಾರಿ ವೆಂಕಟನಾಯಕ್, ಸುಶ್ಮಾ, ಪುಷ್ಪಾ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net