ಗ್ರಾಹಕರು ಬ್ಯಾಂಕ್‌ನ ಆಧಾರ ಸ್ತಂಭ

21..2
ಚಿಕ್ಕೋಡಿಯಲ್ಲಿ ಕೆನರಾ ಬ್ಯಾಂಕ್‌ನ ಗ್ರಾಹಕ ಚಂದ್ರಕಾಂತ ಹುಕ್ಕೇರಿ ಅವರನ್ನು ಉಪಪ್ರಧಾನ ವ್ಯವಸ್ಥಾಪಕ ವೃತ್ತ ಮುಖ್ಯಸ್ಥ ಎಂ. ಸುಂದರರಾಜನ್ ಸನ್ಮಾನಿಸಿದರು. ಟಿ.ಜಿ. ಬೋರಯ್ಯ, ಎಂ. ವಿಜಯ ಕುಮಾರ್ ಇದ್ದರು.
Published on

ಚಿಕ್ಕೋಡಿ: ಗ್ರಾಹಕರು ಬ್ಯಾಂಕ್‌ನ ಆಧಾರ ಸ್ತಂಭ ಎಂದು ಕೆನರಾ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ವೃತ್ತ ಮುಖ್ಯಸ್ಥ ಎಂ. ಸುಂದರರಾಜನ್ ಹೇಳಿದರು.


ಪಟ್ಟಣದ ಕೆನರಾ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶೇಷ ಗ್ರಾಹಕರ ಸಭೆಯಲ್ಲಿ ಮಾತನಾಡಿ, ಗ್ರಾಹಕರ ಮೇಲೆ ಬ್ಯಾಂಕ್ ಅವಲಂಬಿತವಾಗಿವೆ ಎಂದರು. ಡೆಪ್ಯುಟಿ ಜನರಲ್ ಮ್ಯಾನೇಜರ್ ಟಿ.ಜಿ. ಬೋರಯ್ಯ ಮಾತನಾಡಿ, ಗ್ರಾಹಕರು ಮತ್ತು ಬ್ಯಾಂಕ್‌ಗಳ ಪ್ರತಿನಿಗಳ ನಡುವೆ ಹೊಸ ಆಲೋಚನೆಗಳ ವಿನಿಮಯ ಅಗತ್ಯವಾಗಿದೆ. ಸಂಸ್ಥೆಯ ಉದ್ಯೋಗಿಗಳ ಅಗತ್ಯತೆಗಳು ಮತ್ತು ಗ್ರಾಹಕರ ಮನೋಭಾವ ಅರಿಯುವುದು ಅವಶ್ಯ ಎಂದರು.


ಹುಬ್ಬಳ್ಳಿಯ ಕೆನರಾ ಬ್ಯಾಂಕ್‌ನ ನಿವೃತ್ತ ಜನರಲ್ ಮ್ಯಾನೇಜರ್ ಎಂ.ವಿಜಯಕುಮಾರ ಮಾತನಾಡಿ, ಕೆನರಾ ಬ್ಯಾಂಕ್ ವೌಲ್ಯಯುತ ಗ್ರಾಹಕರನ್ನು ಹೊಂದಿದೆ ಎಂದರು. ಕೆನರಾ ಬ್ಯಾಂಕ್ ವೃತ್ತ ಕಚೇರಿಯ ಪ್ರತಿನಿ ಟಿ.ಜಿ. ಬೋರಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net