ಬೆಳಗಾವಿ: ಬಡವರು, ಕೂಲಿ ಕಾರ್ಮಿಕರು, ನಿರ್ಗತಿಕರಿಗೆ ಹೊಟ್ಟೆ ತುಂಬಿಸುವ ಉದ್ದೇಶದಿಂದ ಆರಂಭವಾಗಿ ರುವ ಇಂದಿರಾ ಕ್ಯಾಂಟೀನ್ಗಳು ಸಮಸ್ಯೆಗಳಿಂದ ಬಳಲುತ್ತಿದ್ದು, ಗ್ರಾಹಕರು ಇಲ್ಲದೆ ಬಿಕೋ ಎನ್ನುತ್ತಿವೆ!.
ಹೌದು. ಗುಣಮಟ್ಟದ ಆಹಾರ, ಸ್ವಚ್ಛತೆ, ನಿರ್ವಹಣೆ ಕೊರತೆಯಿಂದ ಗಬ್ಬೆದ್ದು ನಾರುತ್ತಿರುವ ಇಂದಿರಾ ಕ್ಯಾಂಟೀನ್ಗಳಲ್ಲಿ ಕಡಿಮೆ ದರದಲ್ಲಿ ಗುಣಮಟ್ಟದ ಬೆಳಗಿನ ಉಪಾಹಾರ, ಮಧ್ಯಾಹ್ನ, ರಾತ್ರಿ ಊಟ ಲಭ್ಯವಿದ್ದರೂ ಕೂಲಿ ಕಾರ್ಮಿಕರು, ಬಡವರು ಬರಲು ಹಿಂದೇಟು ಹಾಕುತ್ತಿದ್ದಾರೆ. ಶುದ್ಧವಾದ ಕುಡಿಯುವ ನೀರು ಇಲ್ಲ. ಸರ್ಕಾರ ಕೋಟ್ಯಂತರ ರೂ. ಅನುದಾನ ವೆಚ್ಚ ಮಾಡಿದರೂ ಬಡವರಿಗೆ ಗುಣಮಟ್ಟದ ಆಹಾರ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕ್ಯಾಂಟೀನ್ಗಳು ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿವೆ.
ಕಳೆದ ಎರಡು ವರ್ಷಗಳಿಂದ ಅನುದಾನ, ನಿರ್ವಹಣೆ ಇತರೆ ಸಮಸ್ಯೆಗಳಿಂದ ಬಳಲುತ್ತಿರುವ ಇಂದಿರಾ ಕ್ಯಾಂಟೀನ್ಗಳಿಗೆ ಗ್ರಾಹಕರು ಬಾರದಿದ್ದರೂ ಅಧಿಕಾರಿಗಳು, ಮಧ್ಯವರ್ತಿಗಳು ಮಾತ್ರ ಗ್ರಾಹಕರ ಹೆಸರಿನಲ್ಲಿ ವಾರ್ಷಿಕ ಲಕ್ಷಾಂತರ ರೂ. ಖರ್ಚು ಮಾಡುತ್ತಿದ್ದಾರೆ. ಒಂದು ದಿನಕ್ಕೆ 20ರಿಂದ 30 ಜನರು ಬರುವುದು ಅಪರೂಪ. ಕೆಲ ಕ್ಯಾಂಟೀನ್ಗಳು ಜನರಿಲ್ಲದೆ ಬಿಕೋ ಎನ್ನುತ್ತಿದೆ. ಹಾಗಾಗಿ ಮಧ್ಯಾಹ್ನ ಮಾಡಿದ ಅಡುಗೆಯನ್ನು ರಾತ್ರಿ ಉಪಯೋಗಿಸುತ್ತಿದ್ದಾರೆ. ಕಡಿಮೆ ದರ ಇದ್ದರೂ ಗುಣಮಟ್ಟ ಇಲ್ಲ. ಹಾಗಾಗಿ ಅಲ್ಲಿ ಊಟ, ಉಪಾಹಾರ ಸೇವಿಸುವುದನ್ನು ಬಿಟ್ಟಿದ್ದೇವೆ ಎನ್ನುತ್ತಾರೆ ಕಾರ್ಮಿಕರು, ಆಟೋ, ಗೂಡ್ಸ್ ವಾಹನ ಚಾಲಕರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 6 ಇಂದಿರಾ ಕ್ಯಾಂಟೀನ್ಗಳಿದ್ದು, ಪ್ರತಿನಿತ್ಯ 80 ಸಾವಿರ ರೂ. ವರೆಗೆ ಖರ್ಚು ಮಾಡುತ್ತಿದೆ. ಪ್ರತಿದಿನ ಒಬ್ಬ ವ್ಯಕ್ತಿಯ ಉಪಾಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಭೋಜನ ಸೇರಿ ಇಂದಿರಾ ಕ್ಯಾಂಟೀನ್ 57 ರೂ. ದರ ನಿಗದಿಪಡಿದೆ. ಇದರಲ್ಲಿ ಗ್ರಾಹಕರು 25 ರೂ. ನೀಡಿದರೆ ಉಳಿದ 32 ರೂ. ಮಹಾನಗರ ಪಾಲಿಕೆ ಪಾವತಿಸುತ್ತಿದೆ. ಕೆಲವು ಕಡೆ ಬೆಳಗ್ಗೆ ಉಪಾಹಾರಕ್ಕೆ ಮಾತ್ರ ಹೆಚ್ಚಿನ ಜನರು ಬರುತ್ತಾರೆ.
ರಾತ್ರಿ ಜನರು ಬರುವುದು ಅಪರೂಪ. ರಸ್ತೆ ಬದಿ ಸಣ್ಣ ಹೋಟೆಲ್ ಹೆಚ್ಚಾಗುತ್ತಿರುವುದರಿಂದ ಕ್ಯಾಂಟೀನ್ಗಳಿಗೆ ಜನರು ಬಾರದಿರುವುದು. ಇತ್ತೀಚಿನ ದಿನಗಳಲ್ಲಿ ಇಂದಿರಾ ಕ್ಯಾಂಟೀನ್ಗಳ ಕುರಿತು ಪ್ರಚಾರ, ಅರಿವು ಇಲ್ಲದಿರುವುದು ಸಮಸ್ಯೆಗೆ ಒಂದು ಪ್ರಮುಖ ಕಾರಣ ಎನ್ನಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಟ್ಯಂತರ ರೂ. ವೆಚ್ಚ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವೈದ್ಯಕಿಯ ವಿಜ್ಞಾನ ಸಂಸ್ಥೆ (ಜಿಲ್ಲಾ ಆಸ್ಪತ್ರೆ), ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಆವರಣ, ಕೆಎಂಎಫ್ ಆವರಣ, ಗೋವಾವೇಸ್ ಪಾಲಿಕೆಯ ಕಾಂಪ್ಲೆಕ್ಸ್, ನಾಥ ಪೈ ವೃತ್ತ, ನೆಹರು ನಗರದ ಎಪಿಎಂಸಿ ರಸ್ತೆಯಲ್ಲಿ ಒಂದೊಂದು ಕ್ಯಾಂಟೀನ್ ಹಾಗೂ ಕೆಎಂಎಫ್ ಆವರಣದಲ್ಲಿಯೇ ಸಾಮೂಹಿಕ ಅಡುಗೆ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಈ ಕ್ಯಾಂಟೀನ್ಗಳನ್ನು ನಿರ್ಮಿಸಲು ಸರ್ಕಾರವು 6.24 ಕೋಟಿ ರೂ. ವೆಚ್ಚ ಮಾಡಿತ್ತು.

|ಮಂಜುನಾಥ ಕೋಳಿಗುಡ್ಡ