

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ನಗರದ ದಾಜೀಬಾನಪೇಟೆಯ ತುಳಜಾಭವಾನಿ ದೇವಸ್ಥಾನದ ಆವರಣದ ಶ್ರೀಮತಿ ಸೀತಾಬಾಯಿ ಕುಬೇರಸಾ ಹಬೀಬ ಕಲ್ಯಾಣ ಮಂಟಪದಲ್ಲಿ ದಿ ಎಸ್ಎಸ್ಕೆ ಕೋ ಆಪರೇಟಿವ್ ಬ್ಯಾಂಕ್ನ 2021-22ನೇ ಸಾಲಿನ 101ನೇ ವಾರ್ಷಿಕ ಮಹಾಸಭೆ ಶನಿವಾರ ಏರ್ಪಡಿಸಲಾಗಿತ್ತು.
ಬ್ಯಾಂಕಿನ ಪ್ರಗತಿ ವಿವರಿಸಿದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ಅಧ್ಯಕ್ಷ ವಿಠ್ಠಲ ಲದವಾ ಮಾತನಾಡಿ, ಮುಂದಿನ ಹಣಕಾಸು ವರ್ಷದಲ್ಲಿ ಗ್ರಾಹಕರಿಗೆ ಹೆಚ್ಚಿನ ಪ್ರಮಾಣದಲ್ಲಿ ವಿವಿಧ ಸೇವೆ ಒದಗಿಸಲಾಗುವುದು. ಇದಕ್ಕಾಗಿ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದರು.
ಉಪಾಧ್ಯಕ್ಷ ನಾರಾಯಣ ಜರತಾರಘರ, ನಿರ್ದೇಶಕರಾದ ನಾರಾಯಣ ಬದ್ದಿ, ಅರ್ಜುನ ಅಥಣಿ, ದೀಪಕ ಮಗಜಿಕೊಂಡಿ, ಕೃಷ್ಣ ಕಾಟೀಗರ, ಪ್ರಕಾಶ ಬುರಬುರೆ, ನಾರಾಯಣ ಖೋಡೆ, ವಸಂತ ಲದವಾ, ರತ್ನಮಾಲಾ ಬದ್ದಿ, ಸರಳಾ ಭಾಂಡಗೆ, ಸುರೇಶ ಭಾಂಡಗೆ ಮತ್ತು ಅಂಬಾಸಾ ಪೂಜಾರಿ ಉಪಸ್ಥಿತರಿದ್ದರು.
Promise, to, provide, various, services, to, customers