ಗ್ರಾಹಕರ ಸೋಗಿನಲ್ಲಿ ಚಿನ್ನದ ಸರ ಕಳವು

gold chain
Published on

ಮೈಸೂರು: ನಗರದ ಅಶೋಕ ರಸ್ತೆಯ ದೀಪಾ ಚಿನ್ನದ ಅಂಗಡಿಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ 105 ಗ್ರಾಂ ತೂಕದ 6 ಚಿನ್ನದ ಸರವನ್ನು ಕದ್ದೊಯ್ದಿದ್ದಾನೆ.

ಮಂಗಳವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ 50ರಿಂದ 55 ವರ್ಷ ವ್ಯಕ್ತಿ ಈ ಅಂಗಡಿಗೆ ಬಂದಿದ್ದಾನೆ. 2 ಗ್ರಾಂ ತೂಕದ ಚಿನ್ನದ ಕಾಯಿನ್ ದೇವಸ್ಥಾನಕ್ಕೆ ಕೊಡಬೇಕು. ಇದ್ದರೆ ತೋರಿಸಿ ಎಂದಿದ್ದಾನೆ. ಅಂಗಡಿ ಮಾಲೀಕ ಬೇರೆ ಅಂಗಡಿಗಳಿಂದ ಅವುಗಳನ್ನು ತರಿಸಿಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಗಮನ ಬೇರೆಡೆಗೆ ಸೆಳೆದು 105 ಗ್ರಾಂ ತೂಕದ 6 ಚಿನ್ನದ ಸರವನ್ನು ಎಗರಿಸಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಂಗಡಿಯ ಮಾಲೀಕ ರತನ್ ಲಾಲ್ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಲಷ್ಕರ್ ಠಾಣೆ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net