ಗ್ರಾಹಕರ ವೇದಿಕೆ ಮೂಲಕ ಬೆಳೆವಿಮೆ ಪಡೆದ ರೈತರು

Untitled design
ಆನಂತ್‌ರಾಜ ಜೈನ್
Published on

ಹರಪನಹಳ್ಳಿ: ಬೆಳೆವಿಮೆ ಪರಿಹಾರದಿಂದ ವಂಚಿತರಾಗಿದ್ದ ರೈತರು ಗ್ರಾಹಕರ ವೇದಿಕೆ ಮೆಟ್ಟಿಲೇರಿ ಸೂಕ್ತ ಪರಿಹಾರ ಪಡೆದುಕೊಂಡ ಘಟನೆ ಹರಪನಹಳ್ಳಿ ತಾಲೂಕಿನಲ್ಲಿ ನಡೆದಿದೆ.


ಕಳೆದ 2017-18ರಂದು ರೈತರು ಮುಂಗಾರು ಹಂಗಾಮಿನ ಬೆಳೆಗಳಿಗೆ ಫಸಲ್ ಬಿಮಾ ಯೋಜನೆಯಲ್ಲಿ ನಿಗಧಿತ ಶುಲ್ಕ ಪಾವತಿಸಿ ಬೆಳೆವಿಮೆ ಪರಿಹಾರಕ್ಕೆ ನೋಂದಾಯಿಸಿದ್ದರು. ಕೆಲವರಿಗೆ ಅಲ್ಪಸ್ವಲ್ಪ ವಿಮೆ ಹಣ ಬಂದಿತ್ತು. ಆದರೆ ಸಂಬಂಧಿಸಿದ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡದೆ ಹೆಚ್ಚಿನ ಇಳುವರಿ ತೋರಿಸಿ ಪರಿಹಾರ ಬಾರದಂತೆ ಮಾಡಿದ್ದರು.

2021ರಲ್ಲಿ ಬಳ್ಳಾರಿಯ ಗ್ರಾಹಕರ ವೇದಿಕೆಗೆ ಸೂಕ್ತ ಪರಿಹಾರ ಒದಗಿಸುವಂತೆ ರೈತರು ಮೊರೆ ಹೋಗಿದ್ದರು. ಅದರಲ್ಲಿ ಹರಪನಹಳ್ಳಿ ತಾಲೂಕಿನ ಮಾಡ್ಲಿಗೆರಿಯ ಆನಂತ್‌ರಾಜ್ ಜೈನ್ ಹಾಗೂ ಅಶೋಕ ಕುಮಾರ ಜೈನ್ ತೀವ್ರ ಹೋರಾಟ ಮಾಡಿದಾಗ ಇವರಿಬ್ಬರಿಗೆೆ 45 ದಿನದೊಳಗಾಗಿ 1.93 ಲಕ್ಷ ರೂ ಪರಿಹಾರ ನೀಡಲು ಗ್ರಾಹಕರ ವೇದಿಕೆ ಆದೇಶ ಹೊರಡಿಸಿದೆ.


ಆನಂತರಾಜ್ ಜೈನ್ ಮಾತನಾಡಿ, ವಿಮೆ ಕಂಪನಿ ರೈತರಿಂದ ಬೆಳೆವಿಮೆ ಪಾವತಿಸಿಕೊಂಡು ಯಾವುದೇ ಕಾನೂನು ಪ್ರಕಾರ ಸಮೀಕ್ಷೆ ನಡೆಸದೆ ಅನ್ಯಾಯವೆಸಗುತ್ತಿದೆ ಎಂದು ದೂರಿದರು. ಇದೇ ರೀತಿಯಾಗಿ ತಾಲೂಕಿನ 50 ರೈತರಿಗೆ ಗ್ರಾಹಕರ ವೇದಿಕೆಯಿಂದ ಪರಿಹಾರಕ್ಕೆ ಆದೇಶವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net