

ಹುಕ್ಕೇರಿ: ಗ್ರಾಹಕರ ಮೆಚ್ಚುಗೆ ಮತ್ತು ವಿಶ್ವಾಸಕ್ಕೆ ಹೆಸರಾದ ನಿಪ್ಪಾಣಿ ಮೂಲದ ಶ್ರೀ ಮಹಾತ್ಮಾ ಬಸವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ, ಹುಕ್ಕೇರಿ ಶಾಖೆಯು ೧೧ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ ಎಂದು ಶಾಖಾ ಅಧ್ಯಕ್ಷ ಪಿಂಟು (ಶಿವರುದ್ರಪ್ಪ) ಶೆಟ್ಟಿ ಹೇಳಿದರು.
ಪಟ್ಟಣದ ಶಾಖೆಯ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ೧೧ನೇ ವಾರ್ಷಿಕೋತ್ಸವದ ಪೂಜೆ ನೆರವೇರಿಸಿ ಮಾತನಾಡಿ, ಸಂಘದ ಸಂಸ್ಥಾಪಕ ಚೇರ್ಮನ್ ಡಾ.ಚಂದ್ರಕಾಂತ ಕುರಬೇಟ ಅವರ ಮಾರ್ಗದರ್ಶನದಲ್ಲಿ ಶಾಖೆ ಪ್ರಸಕ್ತ ವರ್ಷಾಂತ್ಯಕ್ಕೆ ೨೦.೯೩ ಲಕ್ಷ ರೂ. ಠೇವಣಿ ಸಂಗ್ರಹಿಸಿ ೧೭.೬೭ ಲಕ್ಷ ರೂ. ಸಾಲ ನೀಡಲಾಗಿದೆ. ೧೧೫.೫೨ ಲಕ್ಷ ರೂ. ವಾರ್ಷಿಕ ವಹಿವಾಟು ನಡೆಸಿ ೧.೨೪ ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದರು.
ಶಾಖಾ ವ್ಯವಸ್ಥಾಪಕ ಮಹಾದೇವ ಕರನೂರೆ ಮಾತನಾಡಿ, ಸಂಘ ೩೫ ಶಾಖೆ ಹೊಂದಿದ್ದು, ಕೋರ್ ಬ್ಯಾಂಕಿಂಗ್, ನೆಪ್ಟ್ ಸೇರಿ ಆಧುನಿಕ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಜತೆಗೆ ಸಂಘದ ಸದಸ್ಯರು ನಿಧನರಾದಾಗ ಅವರ ಅಂತ್ಯಕ್ರಿಯೆಗೆ ೧೦ ಸಾವಿರ ರೂ. ನೀಡುತ್ತೇವೆ ಎಂದು ತಿಳಿಸಿದರು.
ನಿರ್ದೇಶಕರಾದ ಮಹಾಂತೇಶ ವಸ್ತ್ರದ, ರಾಮಣ್ಣ ಬೋರಗಲ್ಲೆ, ಸೋಮಶೇಖರ ಕೋಟಗಿ, ಸಿಬ್ಬಂದಿಗಳಾದ ವಿಜಯ ಉಪಾಸೆ, ಮಹೇಶ ಜೀವನಿ, ಪಿಂಟು ಹಲಗೆ ಇತರರಿದ್ದರು.