

ಚಿತ್ರದುರ್ಗ: ನಗರದ ಜೋಗಿಮಟ್ಟಿ ರಸ್ತೆ ಸ್ವಾಮಿ ವಿವೇಕಾನಂದ ನಗರದ ಶ್ರೀ ಮುಕ್ತಿನಾಥೇಶ್ವರ ಸ್ವಾಮಿ ದೇವಾಲಯ ಹಾಗೂ ಹಿಂ ದು ರುದ್ರಭೂಮಿ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನಾ ಸಂಸ್ಥೆಯಿಂದ 2.50 ಲಕ್ಷ ರೂ.ಮಂಜೂರು ಪತ್ರ ವನ್ನು ಗುರುವಾರ ಟ್ರಸ್ಟ್ ಗೌರವಾಧ್ಯಕ್ಷ ಎಸ್.ವಿ.ಗುರುಮೂರ್ತಿ,ಅಧ್ಯಕ್ಷ ಇ.ಅಶೋಕ್ ಕುಮಾರ್ ಅವರಿಗೆ ಹಸ್ತಾಂತರಿಸಲಾಯಿತು.
ಈ ವೇಳೆ ಮಾತನಾಡಿದ ಯೋಜನೆ ಜಿಲ್ಲಾನಿರ್ದೇಶಕ ದಿನೇಶ್ ಪೂಜಾರಿ ಅವರು,ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀವೀರೇಂದ್ರ ಹೆಗ್ಗ ಡೆ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಕೆರೆಗಳ ಹೂಳೆತ್ತುವುದು, ಸ್ಮಶಾನಗಳ ಜೀರ್ಣೋದ್ಧಾರ ಮೊದಲಾದ ಸಮಾಜಮುಖಿ ಸೇವಾ ಕಾ ರ‌್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ ಎಂದರು.
ವೆಂಕಟೇಶ್‌ಬಾಬು,ಡಿ.ರಾಜು,ಸೋಮಪ್ಪಮಾಸ್ಟರ್,ಆರ್.ನಾಗರಾಜ್,ಮೋಹನ್‌ಮಂಜುನಾಥ್,ತಿಮ್ಮಣ್ಣ,ವಿಜಯಕುಮಾರ್,ಶ್ರೀ ನಿವಾಸ್,ನಗರಸಭೆ ಸದಸ್ಯೆಆರ್.ನಾಗಮ್ಮ,ಮಾಜಿ ಸದಸ್ಯ ಮಹೇಶ್,ಸಿವಿಲ್‌ಇಂಜಿನಿಯರ್ ಉಮೇಶ್,ಡಿಎಆರ್ ಪಿಎಸ್‌ಐ ಶಿವರಾಜ್, ಏಕನಾಥೇಶ್ವರಿ ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದೊರೆಸ್ವಾಮಿ ಮತ್ತಿತರರು ಇದ್ದರು.