ಗ್ರಾಮೀಣರಿಗೆ ದಸರಾ ಕ್ರೀಡಾಕೂಟ ಉತ್ತಮ ವೇದಿಕೆ

klb2
ಕೊಡದೂರಿನಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಮುಖಂಡ ಮಲ್ಲಪ್ಪ ದಿಗ್ಗಾಂವ್ ಚಾಲನೆ ನೀಡಿದರು. ಚನ್ನಬಸಪ್ಪ ರುದನೂರ, ರಾಧಾಕೃಷ್ಣ ಮೇಲಕೇರಿ, ಶಾಮರಾವ ಮೋಘಾ, ದೇವಿಂದ್ರ ಹುಣಚಿಕರ್ ಇತರರಿದ್ದರು.
Published on

ಕಾಳಗಿ: ದಸರಾ ಕ್ರೀಡಾಕೂಟಗಳು ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದ್ದು, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ರಾಜ್ಯ ಹಾಗೂ ರಾಷ್ಟç ಮಟ್ಟದಲಿ ಮಿಂಚಬೇಕು ಎಂದು ತಾಲೂಕು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ನೆಲ್ಲಿ ಹೇಳಿದರು.
ಕೊಡದೂರಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರತಿಭೆಗಳಿದ್ದು, ಅಂತಹ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದಸರಾ ಕ್ರೀಡಾಕೂಟ ಸಹಕಾರಿಯಾಗಲಿದೆ ಎಂದರು.

ಮುಖAಡ ಗಣಪತರಾವ ಹಾಲಕಾಯಿ ಮಾತನಾಡಿ, ವ್ಯಕ್ತಿಗೆ ಶಿP್ಷÀಣ ಎಷ್ಟು ಮುಖ್ಯವೋ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದೂ ಅವಶ್ಯ. ಪ್ರತಿ ತಾಲೂಕಿಗೆ ಒಂದು ಕ್ರೀಡಾಂಗಣ ಹಾಗೂ ಕ್ರೀಡಾ ತರಬೇತುದಾರರು ಬೇಕು. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಪ್ರತಿಭಾ ಕಾರಂಜಿಗೆ ಪಾಲಕರು ಪ್ರೋತ್ಸಾಹ ನೀಡಿದಂತೆ, ಕ್ರೀಡಾ ಸ್ಪರ್ಧೆಗಳಿಗೂ ಸಹಕಾರ ನೀಡಿದರೆ ಉತ್ತಮ ಕ್ರೀಡಾ ಪ್ರತಿಭೆ ಹೊರಬರಲು ಸಾಧ್ಯ ಎಂದು ಹೇಳಿದರು.
ಪ್ರೌಢಶಾಲೆ ಮುಖ್ಯಗುರು ಕೆ.ಹರಿಣಿ, ಸಿಆರ್‌ಸಿ ಶಂಕರ ಮಾತನಾಡಿದರು. ಶಿP್ಷÀಣ ಪ್ರೇಮಿ ಮಲ್ಲಪ್ಪ ದಿಗ್ಗಾಂವ್ ಉದ್ಘಾಟಿಸಿದರು.

ಗ್ರಾಪಂ ಅಧ್ಯಕ್ಷೆ ಮಂಜುಳಾ ದಿಗ್ಗಾಂವ್, ಉಪಾಧ್ಯಕ್ಷೆ ರೇಣುಕಾ ರಾಠೋಡ್, ಸದಸ್ಯ ಬಸವರಾಜ ಜಿವಣಗಿ, ಎಸ್‌ಡಿಎಂಸಿ ಅಧ್ಯP್ಷÀ ಚನ್ನಬಸಪ್ಪ ರುದನೂರ, ಉಪಾಧ್ಯP್ಷÀ ರಾಧಾಕೃಷ್ಣ ಮೇಲಕೇರಿ, ದೈಹಿಕ ಶಿP್ಷÀಕರ ಸಂಘದ ತಾಲೂಕು ಅಧ್ಯP್ಷÀ ಶಾಮರಾವ ಮೋಘಾ, ಪ್ರಮುಖರಾದ ದೇವಿಂದ್ರ ಹುಣಚಿಕರ್, ಮಡಿವಾಳಪ್ಪ ಗುಂಡಗುರ್ತಿ, ಕೃಷ್ಣ ಮೇಲಕೇರಿ, ಬಸವರಾಜ ಅರಣಕಲï, ವೀರಣ್ಣ ನಿಂಗದಳ್ಳಿ, ರಾಮಾಂಜನಪ್ಪ, ಮಹಾಂತೇಶಸ್ವಾಮಿ ಕಂಠಿಮಠ, ಸತೀಶ, ಶಿವಪುತ್ರಪ್ಪ, ಶಾಂತಕುಮಾರ, ಗೋವಿಂದ, ರೇವಣಸಿದ್ದ, ಹಾಶಪ್ಪ, ಧನಂಜಯ, ಸಿದ್ರಾಮ ಪಾಳ, ಮಲ್ಲಿಕಾರ್ಜುನ ಪಾಟೀಲ್, ಶಫಿ ಹಲಚೇರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net