ಗ್ರಾಮೀಣರ ಕನಸು ನನಸಾಗಿಸಲು ಮುಂದಾಗಿ

5-11
ಬೈಲಹೊಂಗಲ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಅವರು ತಮ್ಮ ಗೃಹ ಕಚೇರಿಯಲ್ಲಿ ಈಚೆಗೆ ಆಯ್ಕೆಯಾದ ನೂತನ ಗ್ರಾಪಂ ಸದಸ್ಯರನ್ನು ಸತ್ಕರಿಸಿದರು. ಉದ್ಯಮಿ ವಿಜಯ ಮೆಟಗುಡ್ಡ, ಡಾ.ಎ.ಎನ್.ಬಾಳಿ, ಶಿವಬಸಪ್ಪ ತುರಮರಿ, ವಿ.ಬಿ. ಮಠದ, ಬಸವರಾಜ ನರಸನ್ನವರ, ಪುರಸಭೆ ಸದಸ್ಯ ಗುರು ಮೆಟಗುಡ್ಡ, ಇತರರು ಇದ್ದರು.
Published on

ಬೈಲಹೊಂಗಲ, ಬೆಳಗಾವಿ: ಗ್ರಾಮೀಣರ ಗ್ರಾಮಾಭಿವೃದ್ಧಿ ಕನಸನ್ನು ನನಸು ಮಾಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಮಾಜಿ ಶಾಸಕ ಜಗದೀಶ ಮೆಟಗುಡ್ಡ ಹೇಳಿದರು.

ಇಲ್ಲಿನ ತಮ್ಮ ಗೃಹ ಕಚೇರಿಯಲ್ಲಿ ಈಚೆಗೆ ಹೊಸೂರ, ಮಲ್ಲೂರ, ಯಕ್ಕುಂಡಿ ಗ್ರಾಪಂ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರನ್ನು ಹಾಗೂ ವಿಭಾಗ ಮಟ್ಟದ ಶೆಟಲ್ ಬ್ಯಾಡ್ಮಿಂಟನ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ ಮಾದರಿ ನ.4 ಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.

ಮತಕ್ಷೇತ್ರದ ಮೂರು ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದು, ವಿಧಾನಸಭಾ ಚುನಾವಣೆಗೆ ಬಲ ಬಂದಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಗ್ರಾಮೀಣ ಅಭಿವೃದ್ದಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗದೊಂದಿಗೆ ಜನತೆಗೆ ಮೂಲ ಸೌಕರ್ಯ, ಸುಸಜ್ಜಿತವಾದ ರಸ್ತೆ, ಗಟಾರು, ಶುದ್ಧ ಕುಡಿಯುವ ನೀರು, ಬೀದಿ ದೀಪ ಕಲ್ಪಿಸಬೇಕು. ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿ, ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟಿಸಲು ಮುಂದಾಗಬೇಕು. ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಬೈಲಹೊಂಗಲ ಮತಕ್ಷೇತ್ರ ಮತ್ತೆ ಬಿಜೆಪಿ ತೆಕ್ಕೆಗೆ ತರಬೇಕು ಎಂದರು.
ಉದ್ಯಮಿ ವಿಜಯ ಮೆಟಗುಡ್ಡ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಒಗ್ಗೂಡಿ ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಕಾರ್ಯ ಮಾಡಬೇಕೆಂದರು.

ಡಾ.ಎ.ಎನ್.ಬಾಳಿ, ಶಿವಬಸಪ್ಪ ತುರಮರಿ, ವಿ.ಬಿ.ಮಠದ, ಬಸವರಾಜ ನರಸನ್ನವರ, ಪುರಸಭೆ ಸದಸ್ಯ ಗುರು ಮೆಟಗುಡ್ಡ, ಪ್ರಪುಲ್ ಪಾಟೀಲ, ಸುನೀಲ ಮರಕುಂಬಿ, ಸುಭಾಷ ತುರಮರಿ, ಸಚಿನ ಕಡಿ, ಶಿವಾನಂದ ಬಡ್ಡಿಮನಿ, ದಯಾನಂದ ಪರಾಳಶೆಟ್ಟರ, ಸುರೇಶ ಮಡಿವಾಳರ, ಅಜ್ಜಪ್ಪ ಹೊಸೂರ, ಅನಿಲ ಮೆಟಗುಡ್ಡ, ಈಶ್ವರ ಮೆಟಗುಡ್ಡ, ಜಗದೀಶ ಬೂದಿಹಾಳ, ಬಸವರಾಜ ಭರಮನ್ನವರ, ಸಿ.ಐ.ದರೆಪ್ಪನ್ನವರ, ಕುಮಾರ ಬೋರಕನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net