ಗ್ರಾಮೀಣ ಸೇವೆಗಳಿಗೆ ಹೆಚ್ಚಿನ ಒತ್ತು

11-44
ಪಾಂಡೆಗಾಂವ ಗ್ರಾಮದಲ್ಲಿ ಪಾಂಡೆಗಾಂವ-ಚಾಬರವಾಡಿ ರಸ್ತೆ ಕಾಮಗಾರಿಗೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಚಾಲನೆ ನೀಡಿದರು. ಬಾಳು ಹಜಾರೆ, ಮಹಾದೇವ ಪಾಟೀಲ, ಧರೆಪ್ಪ ಹೊನ್ನಾಗೋಳ ಇತರರಿದ್ದರು.
Published on

ಸಂಬರಗಿ: ಮೂಲಸೌಕರ್ಯ ಹೆಚ್ಚಿಸಿ ಕ್ಷೇತ್ರದಲ್ಲಿ ಜನರ ಸಮಸ್ಯೆಗಳನ್ನು ದೂರ ಮಾಡಲು ಶ್ರಮಿಸುವೆ ಎಂದು ಶಾಸಕ ಶ್ರೀಮಂತ ಪಾಟೀಲ ಹೇಳಿದರು.

ಸಮೀಪದ ಪಾಂಡೆಗಾಂವ ಗ್ರಾಮದಲ್ಲಿ ಶನಿವಾರ ಪಾಂಡೆಗಾಂವ-ಚಾಬರವಾಡಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕ್ಷೇತ್ರದಲ್ಲಿನ ಶಿಕ್ಷಣ, ಆರೋಗ್ಯ, ಗ್ರಾಮೀಣ ಸೇವೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆ. ಜನರಿಗೆ ಸುಳ್ಳು ಆಶ್ವಾಸನೆ ನೀಡಲಾರೆ. ರಸ್ತೆ ಸಂಪರ್ಕ ಕಲ್ಪಿಸಲು ಪ್ರಯತ್ನಿಸಿದ್ದೇನೆ. ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಯಿಂದ ರೈತರ ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಅನುಕೂಲವಾಗಲಿದೆ. ಅಗ್ರಾಣಿ ನದಿಗೆ ಬಾಂದಾರ ನಿರ್ಮಿಸಲಾಗಿದೆ ಎಂದರು.

ಶಿರೂರ ಗ್ರಾಪಂ ಅಧ್ಯಕ್ಷ ಬಾಳು ಹಜಾರೆ, ಮಹಾದೇವ ಪಾಟೀಲ, ಅಶೋಕ ಗಡದೆ, ಖಿಳೇಗಾಂವ ಗ್ರಾಪಂ ಅಧ್ಯಕ್ಷ ಧರೆಪ್ಪ ಹೊನ್ನಾಗೋಳ, ರವಿ ನಾಗಗೋಳ, ಶಂಕರ ಸಾಗಾಂವೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net